ಅಯೋಧ್ಯೆ: ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಮೂರು ವರ್ಷದ ಕಂದಮ್ಮನನ್ನು ಹತ್ಯೆಗೈದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
ಶಹಜನ್ ಖಂಡಕರ್ ಎಂಬಾತ ತನ್ನ ಪತ್ನಿ ಹಾಗೂ ಮೂರು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಹತ್ಯೆಗೂ ಮುನ್ನ ತನ್ನ 13 ವರ್ಷದ ಹಿರಿಯ ಮಗನ್ನು ಮನೆಯ ಹೊರಗೆ ಮಲಗಿಸಿದ್ದಾನೆ. ಬಳಿಕ ತಡರಾತ್ರಿ ಪತ್ನಿ ಮುಖಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದಾನೆ ಬಳಿಕ ಮೂರು ವರ್ಷದ ಇನ್ನೋರ್ವ ಮಗನನ್ನು ಕೊಂದು ಪರಾರಿಯಾಗಿದ್ದಾನೆ.
ಹಿರಿಯ ಮಗ ಇಂದು ಮುಂಜಾನೆ ಎಚ್ಚರವಾದಾಗ ಮನೆ ಒಳಗೆ ಹೋಗಿ ನೋಡಿದಾಗ ತಾಯಿ ಹಾಗೂ ತಮ್ಮ ಕೊಲೆಯಾಗಿರುವುದು ಗೊತ್ತಾಗಿದೆ. ಇದನ್ನು ಕಂಡು ಬಾಲಕ ಕೋಗಿಕೊಂಡಿದ್ದಾನೆ. ಅಕ್ಕಪಕ್ಕದ ಮನೆಯವರು ಪೊಲೀಸರುಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.