ಚೆನ್ನೈ: ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆಗೈದ ಪತಿ, ರುಂಡಗಳೊಂದಿದೆ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಕಲ್ಲಕುರುಚಿಯಲ್ಲಿ ಈ ಘಟನೆ ನಡೆದಿದೆ. ಮರಕಡಿಯುವ ಕೆಲಸ ಮಾಡುವ ಕೊರಂಜಿ ಎಂಬಾತ ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಎಂಬಾತನೊಂದಿಗೆ ಅಕ್ರಮ ಸಂಅಬ್ಂಧವಿದೆ ಎಂದು ಶಂಕಿಸಿ ಇಬ್ಬರನ್ನೂ ಹತ್ಯೆ ಮಾಡಿದ್ದಾನೆ.
ಕೆಲಸವಿದೆ ಹೊರಗಡೆ ಹೋಗಬೇಕು. ಬರುವುದು ತುಂಬಾ ತಡವಾಗುತ್ತದೆ ಎಂದು ಪತ್ನಿಗೆ ಹೇಳಿ ಕೊರಂಜಿ ಮನೆಯಿಂದ ಹೋಗಿದ್ದ. ಹೀಗೆ ಹೋದವನು ಕೆಲ ಸಮಯದಲ್ಲೇ ಮನೆಗೆ ವಾಪಾಸ್ ಆಗಿದ್ದಾನೆ. ಮನೆಯ ಟೆರೇಸ್ ಮೇಲೆ ಪತ್ನಿ ಲಕ್ಷ್ಮೀ ಹಾಗೂ ತಂಗರಸು ಜೊತೆಗಿರುವುದು ಗೊತ್ತಾಗಿದೆ. ಇದರಿಂದ ಇನ್ನಷ್ಟು ಅನುಮಾನಗೊಂಡು ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ. ಬಳಿಕ ಎರಡೂ ರುಂಡಗಳನ್ನು ಹಿಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹೀಗೆ ಠಾಣೆಗೆ ಹೋಗುವಾಗ ತನ್ನ ಬೈಕ್ ಗೆ ಎರಡೂ ರುಂಡಗಳನ್ನು ಕಟ್ಟಿಕೊಂಡು ವೆಲ್ಲೂರು ಕೇಂದ್ರ ಕಾರಾಗೃಹ ಠಾಣೆಗೆ ಹೋಗಿ ಶರಣಾಗಿದ್ದಾನೆ.