SHOCKING NEWS: ಮತ್ತೊಂದು ಅಮಾನುಷ ಘಟನೆ: ಹೆಣ್ಣುಮಗು ಹೆತ್ತಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಸುಟ್ಟು ಹತ್ಯೆಗೈದ ಗಂಡ

ಹೆಣ್ಣುಮಗು ಹೆತ್ತಳೆಂದು ಪತ್ನಿಯನ್ನೇ ಪತಿ ಮಹಾಶಯ ಬೆಂಕಿಹಚ್ಚಿ ಸುಟ್ಟು ಹಯೆಗೈದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಮೂರನೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಹೆಣ್ಣುಮಗು ಹುಟ್ಟಿದ್ದಕ್ಕೆ ಕೋಪಗೊಂಡ ಗಂಡ, ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಕುಂಡ್ಲಿಕ್ ಉತ್ತಮ್ ಕಾಳೆ (32) ಎಂಬಾತ ಮಹಾರಾಷ್ಟ್ರದ ಗಂಗಾಖೇಡ್ ನಾಕಾದಲ್ಲಿ ಪತ್ನಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಮೈನಾ ಕೊಲೆಯಾಗಿರುವ ಮಹಿಳೆ. ಆರೋಪಿ ಕುಂಡ್ಲಿಕ್ ಉತ್ತಮ್ ಈ ಹಿಂದೆಯೇ ಮೂರನೆಯದೂ ಹೆಣ್ಣು ಮಗುವಾದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನಂತೆ. ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತಂತೆ.

ಈಗ ಹೆಣ್ಣುಮಗು ಹುಟ್ಟುತ್ತಿದ್ದಂತೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನೆರೆಹೊರೆಯವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮೈನಾ ಸಾವನ್ನಪ್ಪಿದ್ದಾಳೆ. ಹಸುಗೂಸು ಸೇರಿ ಮೂವರು ಹೆಣ್ಣುಮಕ್ಕಳು ಅನಾಥವಾಗಿದ್ದಾರೆ.

ಕೊಲೆ ಆರೋಪಿ ಕುಂಡ್ಲಿಕ್ ಉತ್ತಮ್ ನನ್ನು ಗಂಗಾಖೇಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read