ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಆಕೆಯನ್ನು ಕೊಲೆಗೈದಿದ್ದ ಪತಿ ಮಹಾಶಯ, ವಾಟರ್ ಹೀಟರ್ ಹಾಕಿವಾಗ ಕರೆಂಟ್ ಶಾಕ್ ಹೊಡೆದು ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಶಾಂತ್ ಕಮ್ಮಾರ್ (25) ಬಂಧಿತ ವ್ಯಕ್ತಿ. ಪತ್ನಿ ರೇಷ್ಮಾ (35)ಳನ್ನೇ ಕೊಲೆಗೈದು ಸುಳ್ಳು ಹೇಳಿದ್ದ.
ರೇಷ್ಮಾ ಈ ಹಿಂದೆ ಸುರೇಂದರ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ವರ್ಷ ಹಿಂದೆ ಬಳ್ಳಾರಿಯ ಹೂವಿನ ಹಡಗಲಿ ಮೂಲದ ಪ್ರಶಾಂತ್ ಇನ್ ಸ್ಟಾಗ್ರಾಂ ನಲ್ಲಿ ಪರಿಚಯನಾಗಿದ್ದಾ. ಹೀಗೆ ಇಬ್ಬರ ನಡುವೆ ಪರಿಚಯ ಪ್ರೀತಿಗೆ ತಿರುವುಗಿ ಇಬ್ಬರೂ ಮದುವೆಯಾಗಿದ್ದರು. ಹೆಬ್ಬಗೋಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ.
ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಪ್ರಶಾಂತ್, ಪತ್ನಿ ರೇಷ್ಮಾ ಮೇಲೆ ಅನುಮಾನಿಸುತ್ತಿದ್ದ.. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ರೇಷ್ಮಾಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿದ್ದಾನೆ. ಮಗಳು ಮನೆಗೆ ಬರುವಷ್ಟರಲ್ಲಿ ರೇಷ್ಮಾ ಪ್ರಜ್ಞೆಕಳೆದುಕೊಂಡು ಬಿದ್ದಿದ್ದರು. ಸ್ಥಳೀಯರ ಸಹಯದಿಂದ ರೇಷ್ಮಾಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಪ್ಪನ ಹಲ್ಲೆ ಬಗ್ಗೆ ಮಗಳು ದೂರು ನೀಡಿದ್ದಳು. ಪೊಲೀಸರು ಪ್ರಶಾಂತ್ ನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ,ಆಡಿರುವುದಾಗಿ ಬಾಯ್ಬಿಟ್ಟಿದ್ದಾನೆ.