ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸದ ಪತಿ: ಮೊಬೈಲ್ ಪರಿಶೀಲಿಸಿದ ಪತ್ನಿಗೆ ಬಿಗ್ ಶಾಕ್

ಬೆಂಗಳೂರು: ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸದ ಗಂಡನ ವಿರುದ್ಧ ಟೆಕ್ಕಿಯಾಗಿರುವ ಮಹಿಳೆ ದೂರು ನೀಡಿದ್ದಾರೆ.

ಪತಿ ಸಲಿಂಗಿಯಾಗಿದ್ದು, ಆತನ ವರ್ತನೆಯಿಂದ ಬೇಸತ್ತು ಜ್ಞಾನ ಭಾರತಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಮದುವೆಯಾದಾಗಿನಿಂದಲೂ ಪತಿ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ. ಆತನ ಬಗ್ಗೆ ಅನುಮಾನಗೊಂಡು ವಾಟ್ಸಾಪ್, ಮೆಸೇಂಜರ್ ಪರಿಶೀಲಿಸಿದಾಗ ಗಂಡನ ಅಸಲಿ ವಿಚಾರ ಬಯಲಾಗಿದೆ.

ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಗನ ವಿಚಾರ ಗೊತ್ತಿದ್ದರೂ ಪೋಷಕರು ಮದುವೆ ಮಾಡಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ 160 ಗ್ರಾಂ ಚಿನ್ನಾಭರಣ, ನಗದು ನೀಡಲಾಗಿತ್ತು. ಮಗ ಸಲಿಂಗಿ ಎನ್ನುವ ವಿಚಾರವನ್ನು ಪೋಷಕರು ಮುಚ್ಚಿಟ್ಟಿದ್ದರು.

ಮದುವೆಯಾದಾಗಿನಿಂದ ದೈಹಿಕ ಸಂಬಂಧ ಮುಂದೂಡುತ್ತಲೇ ಇದ್ದ ಪತಿಯ ಬಗ್ಗೆ ಪತ್ನಿಗೆ ಅನುಮಾನ ಬಂದಿತ್ತು. ಪತಿಯ ಸಹೋದರನಿಗೆ ಮಕ್ಕಳಾಗಿದ್ದು, ನೀವು ಮಕ್ಕಳನ್ನು ಮಾಡಿಕೊಳ್ಳಿ ಎಂದು ಕುಟುಂಬದವರು ಒತ್ತಾಯ ಮಾಡುತ್ತಿದ್ದರು. ಮಕ್ಕಳ ಬಗ್ಗೆ ಮಾತನಾಡುತ್ತಿದ್ದಂತೆ ಪತಿ ಪಲಾಯನ ಮಾಡುತ್ತಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಟೆಕ್ಕಿ ಪತ್ನಿ ವಾಟ್ಸಾಪ್, ಮೆಸೇಂಜರ್ ಪರಿಶೀಲಿಸಿದಾಗ ಸಲಿಂಗಿ ಎನ್ನುವುದು ಗೊತ್ತಾಗಿದೆ.

ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಪೋಷಕರು ಬಳಿ ತಿಳಿಸಿದಾಗ ಅನುಸರಿಸಿಕೊಂಡು ಹೋಗು ಎಂದು ಹೇಳಿದ್ದಾರೆ. ಇದರಿಂದ ನೊಂದ ಟೆಕ್ಕಿ ಮಹಿಳೆ ಪತಿ ಮತ್ತು ಆತನ ಪೋಷಕರ ವಿರುದ್ಧ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read