ʼಸೋಷಿಯಲ್‌ ಮೀಡಿಯಾʼ ಲವ್‌ : ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಮಹಿಳೆ ‌ʼಪರಾರಿʼ | Watch Video

ತೆಲಂಗಾಣದ ಮೆದ್ಚಲ್ ಜಿಲ್ಲೆಯ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳ 5 ರಂದು ಜಯರಾಜ್ ಎಂಬುವವರು ತಮ್ಮ ಪತ್ನಿ ಸುಕನ್ಯಾ (35) ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರಿಗೆ, ಸುಕನ್ಯಾ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾದ ಗೋಪಿ (22) ಎಂಬಾತನ ಜೊತೆ ಪರಾರಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಜಯರಾಜ್ ತಮ್ಮ ಪತ್ನಿ ಮತ್ತು ಆಕೆಯ ಪ್ರಿಯಕರ ಬೈಕ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಂಡು ಅವರನ್ನು ಹಿಂಬಾಲಿಸಿದ್ದಾರೆ. ಕೊನೆಗೆ ಮೆದ್ಚಲ್ ಆಕ್ಸಿಜನ್ ಪಾರ್ಕ್ ಬಳಿ ಅವರನ್ನು ಮುಖಾಮುಖಿಯಾಗಿದ್ದಾರೆ.

ತೊಂದರೆಯಾಗುವ ಸೂಚನೆ ಸಿಕ್ಕ ಕೂಡಲೇ ಗೋಪಿ ಮತ್ತು ಸುಕನ್ಯಾ ಬೈಕ್ ಅನ್ನು ಅಲ್ಲೇ ಬಿಟ್ಟು ಚಲಿಸುತ್ತಿದ್ದ ಬಸ್‌ಗೆ ಹತ್ತಿ ಪರಾರಿಯಾಗಿದ್ದಾರೆ.

ನಂತರ ಜಯರಾಜ್ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read