ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಮಹಿಳೆಯೊಬ್ಬರು ಹಾಡಹಗಲೇ ಪತಿಯನ್ನು ಕೊಂದಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕೊಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಯಾರೊಬ್ಬರೂ ಕೊಲೆ ತಡೆಯುವ ಪ್ರಯತ್ನ ಮಾಡಿಲ್ಲ.
ಗಾಯತ್ರಿ ಹೆಸರಿನ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಗಾಯತ್ರಿ ಮತ್ತು ಅವಳ ಪತಿ ಸತ್ಯಪಾಲ್ ನಡುವೆ ಆಗಾಗ ಜಗಳ ಆಗ್ತಾ ಇತ್ತು. ಗುರುವಾರ ಮಧ್ಯಾಹ್ನ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೆಂಡತಿ ಗಂಡನನ್ನು ನೆಲಕ್ಕೆ ಉರುಳಿಸಿ, ಅವನ ಎದೆಯ ಮೇಲೆ ಕುಳಿತು, ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾಳೆ. ಇಷ್ಟಾದ್ರೂ ಮಹಿಳೆ ಕೋಪ ಕಡಿಮೆಯಾಗಲಿಲ್ಲ. ಪತಿ ಮಿದುಳನ್ನು ಹೊರಗೆ ತೆಗೆದಿದ್ದಾಳೆ.
ಘಟನೆ ನಂತ್ರ ಅಲ್ಲಿಂದ ಓಡಿ ಹೋಗದ ಮಹಿಳೆ ಪೊಲೀಸರಿಗೆ ಶರಣಾಗಿದ್ದಾಳೆ. ಸತ್ಯಪಾಲ್ ತನ್ನ ಪತ್ನಿ ಗಾಯತ್ರಿ ಮತ್ತು ಮಗ ಮತ್ತು ಮಗಳೊಂದಿಗೆ ಶಹಜಹಾನ್‌ಪುರದ ಹತೌರಾ ಬುಜುರ್ಗ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮಗ ಬಿಎ ಪಾಸ್ ಆಗಿದ್ದು, ಮಗಳು 10ನೇ ತರಗತಿ ಓದುತ್ತಿದ್ದಾಳೆ. ಸತ್ಯಪಾಲ್ ನ ವೃದ್ಧ ತಾಯಿಯೂ ಅವರ ಜೊತೆ ವಾಸವಾಗಿದ್ದಾಳೆ.
https://twitter.com/crimeweek_news/status/1821523148203872560?ref_src=twsrc%5Etfw%7Ctwcamp%5Etweetembed%7Ctwterm%5E1821523148203872560%7Ctwgr%5E17b26d676a7252adc92d9428ae8e72cc2a703250%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Ftopindiannews-epaper-dh90d0f8f90ef3441695ffc4a0a4a51e7c%2Futtarpradeshwifedragshusbandoutofhousecrusheshisheadwithbrickwatch-newsid-n625732592