ಪತಿಯೊಂದಿಗೆ ‘ಲೈಂಗಿಕ ಕ್ರಿಯೆ’ ನಡೆಸಲು ಶುಲ್ಕ ವಿಧಿಸುತ್ತಿದ್ದ ಪತ್ನಿ; ನ್ಯಾಯಾಲಯದಿಂದ ವಿಚ್ಛೇದನ ಮಂಜೂರು…!

ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ತೈವಾನ್ ನಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಕ್ಕೆ ಈಗ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

2014ರಲ್ಲಿ ಈ ಜೋಡಿ ವಿವಾಹವಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಮೂರು ವರ್ಷಗಳ ಕಾಲ ಎಲ್ಲವೂ ಸರಿ ಇದ್ದು 2017 ರಲ್ಲಿ ಆತನ ಪತ್ನಿ ತಿಂಗಳಿಗೆ ಒಮ್ಮೆ ಮಾತ್ರ ಲೈಂಗಿಕ ಕ್ರಿಯೆ ಎಂಬ ಷರತ್ತನ್ನು ವಿಧಿಸಿದ್ದಳಂತೆ. ಆನಂತರ 2019 ರಲ್ಲಿ ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಿಲ್ಕುಲ್ ನಿರಾಕರಿಸಿದ್ದು, ಮಾತನಾಡುವುದನ್ನೂ ಬಿಟ್ಟಿದ್ದಾಳೆ.

ಆದರೆ ಪತಿಯ ಬಲವಂತದ ಮೇರೆಗೆ ಸಮ್ಮತಿ ಸೂಚಿಸಿದ ಆಕೆ ಒಮ್ಮೆ ಲೈಂಗಿಕ ಸಂಪರ್ಕ ಹೊಂದಲು 1,500 ರೂಪಾಯಿ ಶುಲ್ಕ (ಅಂದಾಜು 15 ಡಾಲರ್) ವಿಧಿಸಲು ಆರಂಭಿಸಿದ್ದಳಂತೆ. ಇದರಿಂದ ಬೇಸತ್ತ ಪತಿ, ಆ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಬಳಿಕ ಪರಸ್ಪರ ಮಾತುಕತೆ ಮೇರೆಗೆ ಪ್ರಕರಣ ಸುಖಾಂತ್ಯಗೊಂಡಿತ್ತು.

ಆದರೆ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿದ್ದು, ಪತಿಯೊಂದಿಗೆ ಸಂಪರ್ಕ ಸಾಧಿಸಲು ಆಕೆ ಮೊಬೈಲ್ ಮೆಸೇಜ್ ಹಾಗೂ ಸನ್ನೆಯ ಭಾಷೆ ಉಪಯೋಗಿಸುತ್ತಿದ್ದಳಂತೆ. ಇದರಿಂದ ಬೇಸತ್ತ ಪತಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ಆತನ ವಿಚ್ಛೇದನ ಅರ್ಜಿಯನ್ನು ಮನ್ನಿಸಿರುವ ನ್ಯಾಯಾಲಯ ವಿವಾಹ ಬಂಧ ಕಡಿದುಕೊಳ್ಳಲು ಸಮ್ಮತಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read