ದಾರಿ ತಪ್ಪಿದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಗ್ರೇಟರ್ ನೋಯ್ಡಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಸ್ರಖ್ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಗ್ರೇಟರ್ ನೋಯ್ಡಾ ಪೊಲೀಸರು ಹೇಳಿದ್ದಾರೆ.

ಮಹಿಳೆ ಈ ತಿಂಗಳ ಆರಂಭದಲ್ಲಿ ತನ್ನ ಗಂಡನ ಬಗ್ಗೆ ಕಾಣೆಯಾದ ದೂರಿನೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಳು. ಅಂದಿನಿಂದ ಪೊಲೀಸರು ಪ್ರಕರಣದ ನಿಗೂಢ ಭೇದಿಸಲು ಹರಸಾಹಸ ಪಡುತ್ತಿದ್ದರು.

ತನಿಖೆಯ ಸಮಯದಲ್ಲಿ, ಪೊಲೀಸರಿಗೆ ದೂರು ನೀಡಿದ್ದ ಮಹಿಳೆಯ ಮೇಲೆ ಶಂಕೆ ಮೂಡಿದೆ. ಅವಳನ್ನು ವಿಚಾರಣೆ ಮಾಡಿದಾಗ, ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರ ಪ್ರಕಾರ, ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ಶವವನ್ನು ಮನೆಯಲ್ಲಿ ಗುಂಡಿ ತೋಡಿ ಹೂತು ಹಾಕಿದ್ದಾಳೆ. ಜನವರಿ 1 ರಂದು ತನ್ನ ಗಂಡನ ಕಾಣೆಯಾದ ದೂರು ಸಲ್ಲಿಸಿದ್ದಾಳೆ.

ಪೊಲೀಸರನ್ನು ದಾರಿತಪ್ಪಿಸಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಮಹಿಳೆ ದೂರು ನೀಡಿದ್ದಾಳೆ. ತನಿಖೆ ಬಳಿಕ. ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read