ಉತ್ತರ ಪ್ರದೇಶದ ಬಹ್ರಿಯಾಚ್ ಜಿಲ್ಲೆಯಲ್ಲಿ ಕಿರಿಯ ಅಭಿಯಂತರ (ಜೆಇ) ಆಗಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಇಲ್ಲದ ವೇಳೆ ಅನ್ಯ ಸ್ತ್ರೀಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಪತ್ನಿ ಹಾಗೂ ಆಕೆಯ ಸಹೋದರರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಜೆಇಗೆ ಆತನ ಭಾಮೈದನರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಮಡದಿ ತವರಿಗೆ ಹೋಗಿದ್ದೇ ತಡ, ಪ್ರೇಯಸಿಯನ್ನು ಕರೆಯಿಸಿಕೊಂಡ ಈ ಜೆಇ ಆಕೆಯೊಂದಿಗೆ ಸಲ್ಲಾಪದಲ್ಲಿ ಭಾಗಿಯಾಗಿದ್ದ. ಐದು ದಿನಗಳಿಂದ ತನ್ನ ಮನೆಯಲ್ಲಿ ಪರಸ್ತ್ರೀಯೊಬ್ಬಳು ಪತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಅರಿತ ಪತ್ನಿ ತನ್ನ ಸಹೋದರರನ್ನು ಕರೆದುಕೊಂಡು ಮನೆಗೆ ’ಅಚ್ಚರಿಯ ಭೇಟಿ’ ಕೊಟ್ಟಿದ್ದಾಳೆ.
ಈ ವೇಳೆ ಅನ್ಯ ಸ್ತ್ರೀಯೊಂದಿಗೆ ಇದ್ದ ತನ್ನ ಪತಿಯನ್ನು ಕಂಡು ಕೆಂಡಾಮಂಡಲವಾದ ಪತ್ನಿ ತನ್ನ ಪತಿಗೆ ಚೆನ್ನಾಗಿ ಬೈದಿದ್ದಲ್ಲದೇ ಸಹೋದರರಿಂದ ಧರ್ಮದೇಟು ಹಾಕಿಸಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ರಾಜಿ ಪಂಚಾಯಿತಿ ಮಾಡಲಾಗಿದ್ದು, ತಾನು ಇನ್ನೆಂದೂ ಆ ಮಹಿಳೆಯೊಂದಿಗೆ ಸೇರುವುದಿಲ್ಲವೆಂದು ಜೆಇ ಮಾತು ಕೊಟ್ಟ ಬಳಿಕ ಆತನೊಂದಿಗೆ ಸಂಸಾರ ಮುಂದುವರೆಸಿಕೊಂಡು ಹೋಗಲು ಮಡದಿ ಒಪ್ಪಿದ್ದಾಳೆ.
https://twitter.com/khabriduniya/status/1668641967063072768?ref_src=twsrc%5Etfw%7Ctwcamp%5Etweetembed%7Ctwterm%5E1668641967063072768%7Ctwgr%5E782be2ba2d54f0a076eb5234b8c30f005807dbf5%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fviral-video-wife-finds-engineer-husband-living-with-another-woman-in-bahraich-house-brother-in-laws-thrash-him