ನವದೆಹಲಿ: ಪತಿಯ ನಿಖರವಾದ ಆದಾಯ ತಿಳಿದುಕೊಳ್ಳಲು ಪತ್ನಿ ಬ್ಯಾಂಕ್ ಗೆ ನೋಟಿಸ್ ನೀಡಬಹುದು ಎನ್ನುವ ತನ್ನ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರ ದುಡೇಜಾ ಅವರು ವಿವರವಾದ 11 ಪುಟಗಳ ತೀರ್ಪು ನೀಡಿದ್ದಾರೆ. ಪತಿಯ ಆದಾಯದ ಕುರಿತಾದ ಪತ್ನಿಯ ಅರ್ಜಿ ಮಾನ್ಯ ಮಾಡಿದ್ದಾರೆ. ಅಲ್ಲದೇ, ಅವರ ವಿನಂತಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಹಿಂದಿನ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ.
ವೈವಾಹಿಕ ಮೊಕದ್ದಮೆಗಳು, ವಿಶೇಷವಾಗಿ ಆರ್ಥಿಕ ಅವಲಂಬನೆ ಮತ್ತು ಮರೆ ಮಾಚುವಿಕೆ ಆರೋಪಗಳನ್ನು ಹೊಂದಿದ ಸಂದರ್ಭದಲ್ಲಿ ಪ್ರಾಯೋಗಿಕ ವಿಧಾನ ಬಯಸುತ್ತದೆ ಎಂದು ನ್ಯಾಯಪೀಠ ಹೇಳಿದ.
ಅರ್ಜಿದಾರರು ಕೋರಿದ ದಾಖಲೆಗಳು ಮತ್ತು ಸಾಕ್ಷಿಗಳು ಮೇಲಾದಾರ ಅಥವಾ ಪ್ರಸ್ತುತವಲ್ಲ. ಆ ದಾಖಲೆಗಳು ಅವರ ಜೀವನಾಂಶ ನಿರ್ಣಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಜೀವನಾಂಶ ನೀಡುವುದನ್ನು ತಪ್ಪಿಸಲು ಗಂಡಂದಿರು ತಮ್ಮ ನಿಜವಾದ ಆದಾಯ ಮರೆಮಾಚುತ್ತಾರೆ. ಪತ್ನಿಯರಿಗೆ ಕಾನೂನುಬದ್ಧ ಪಾವತಿ ತಪ್ಪಿಸಲು ತಮ್ಮ ಆಸ್ತಿ ವರ್ಗಾಯಿಸಲು ಬಯಸುವುದಿಲ್ಲ. ಹೀಗಾಗಿ ಪತಿಯ ಆದಾಯ ತಿಳಿಯಲು ಪತ್ನಿ ಬ್ಯಾಂಕ್ ಗಳಿಗೆ ನೋಟಿಸ್ ನೀಡಬಹುದು ಎಂದು ಹೈಕೋರ್ಟ್ ಹೇಳಿದೆ.