’ನನ್ನ ಪತಿಯನ್ನು ಪರಸ್ತ್ರೀಯರೊಂದಿಗೆ ಹಂಚಿಕೊಳ್ಳಲು ಬೇಸರವಿಲ್ಲ’; ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ ಮಹಿಳೆಯ ಹೇಳಿಕೆ

ಯಾವುದೇ ಸಂಬಂಧದ ತಳಪಾಯ ಎಂದರೆ ಪರಸ್ಪರರ ನಡುವಿನ ನಂಬಿಕೆ ಹಾಗೂ ಪ್ರಾಮಾಣಿಕತೆ. ಆದರೆ ಇಲ್ಲೊಬ್ಬ ಹೆಂಗಸು ತನ್ನ ಪತಿ ಅನ್ಯ ಹೆಂಗಸರೊಂದಿಗೆ ಸಮಯ ಕಳೆಯುವುದಕ್ಕಾಗಲೀ, ಅಥವಾ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದಕ್ಕಾಗಲೀ ತನ್ನದೇನೂ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

37 ವರ್ಷ ವಯಸ್ಸಿನ ಅಮೆರಿಕನ್ ಮಹಿಳೆ ಮೋನಿಕಾ ಹಲ್ಡ್ಟ್‌ ತನ್ನ ಪತಿಯ ಯಾವುದೇ ರೀತಿಯ ಅಗತ್ಯಗಳನ್ನು ಪೂರೈಸಲು ತನಗೆ ಸಂತಸವಾಗುತ್ತದೆ ಎನ್ನುತ್ತಾರೆ.

ತನ್ನ ಪತಿ ಜಾನ್‌ನನ್ನು ಖುಷಿಯಾಗಿಡುವುದೇ ತನ್ನ ಗುರಿಯಾಗಿದೆ ಎಂದು ಮೋನಿಕಾ ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಜಾನ್‌ನೊಂದಿಗೆ ತನ್ನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಆತನಿಗೆ ಅನ್ಯ ಸ್ತ್ರೀಯರೊಂದಿಗೆ ಹರಟೆ ಹೊಡೆಯಲು ಬಿಡುವುದು ಮಾತ್ರವಲ್ಲದೇ ಪರಸ್ತ್ರೀಯರೊಂದಿಗೆ ಆತನನ್ನು ಹಂಚಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ.

“ಮನೆಯಲ್ಲಿ ನಾನು ಸೆಕ್ಸಿಯಾಗಿ, ಸ್ಪೋರ್ಟಿಯಾಗಿ ಬಟ್ಟೆ ಹಾಕಿಕೊಳ್ಳುವುದು ಜಾನ್‌ಗೆ ಇಷ್ಟವಾಗುತ್ತದೆ. ಕೆಲ ಮಹಿಳೆಯರಿಗೆ ಏನು ಧರಿಸಬೇಕೆಂಬ ಬಗ್ಗೆ ಬೇರೆಯವರು ಹೇಳುವುದು ಇಷ್ಟವಾಗುವುದಿಲ್ಲ, ಆದರೆ ನನಗೆ ಹೀಗೆ ಹೇಳಿದರೆ ಇಷ್ಟವಾಗುತ್ತದೆ. ನಾನು ಆತ ಹೇಳಿದ ಹಾಗೆ ಕೇಳಿದರೆ ಆತ ಖುಷಿಯಾಗುತ್ತಾನೆ, ಅದರಿಂದ ನಾನೂ ಖುಷಿಯಾಗುತ್ತೇನೆ,” ಎಂದು ಮೋನಿಕಾ ತಿಳಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read