ಈಗ ಆನ್ಲೈನ್‌ ನತ್ತ ಮುಖ ಮಾಡಿದೆ 400 ವರ್ಷಕ್ಕೂ ಹಳೆಯ ದೈನಿಕ….!

ಚಾಲ್ತಿಯಲ್ಲಿರುವ ಅತ್ಯಂತ ಹಳೆಯ ಸುದ್ದಿ ಪತ್ರಿಕೆಗಳಲ್ಲಿ ಒಂದಾದ ಆಸ್ಟ್ರಿಯಾದ ವಾಯ್ನರ್‌ ಜ಼ಾಯ್ಟಂಗ್ ಇನ್ನು ಮುಂದೆ ಆನ್ಲೈನ್‌ನಲ್ಲಿ ಪ್ರಧಾನವಾಗಿ ಪ್ರಕಟಗೊಳ್ಳಲು ಬಯಸಿದೆ.

ಆಸ್ಟ್ರಿಯಾದ ಸರ್ಕಾರೀ ಸ್ವಾಮ್ಯದ ಈ ಪತ್ರಿಕೆಯ ಭವಿಷ್ಯದ ಕುರಿತು ಸರ್ಕಾರ ಹಾಗೂ ಸುದ್ದಿ ಪತ್ರಿಕೆ ಸಂಸ್ಥೆಯ ನಡವೆ ಸುದೀರ್ಘಾವಧಿ ಚರ್ಚೆಗಳ ಬಳಿಕ ಈ ಬೆಳವಣಿಗೆಗೆ ಬರಲಾಗಿದೆ.

1703ರಲ್ಲಿ ವೈನರ್‌ಶೆಸ್ ಡಯಾರಿಯಮ್ ಎಂಬುವರು ಸ್ಥಾಪಿಸಿದ ಈ ದೈನಿಕದ ಹೆಸರನ್ನು 1780ರಲ್ಲಿ ವಾಯ್ನರ್‌ ಜ಼ಾಯ್ಟಂಗ್ ಎಂದು ಮರು ನಾಮಕರಣ ಮಾಡಲಾಯಿತು.

ಆರಂಭದಲ್ಲಿ ಎರಡು ವಾರಗಳಿಗೆ ಒಮ್ಮೆ ಬರುತ್ತಿದ್ದ ಈ ಪತ್ರಿಕೆಯನ್ನು 1857ರಲ್ಲಿ ಆಸ್ಟ್ರಿಯಾದ ಅಂದಿನ ದೊರೆ ಒಂದನೇ ಫ್ರಾಂಜ಼್ ಜೋಸೆಫ್ ರಾಷ್ಟ್ರೀಕರಣಗೊಳಿಸಿದರು. ಆ ನಂತರ ಆಸ್ಟ್ರಿಯಾದ ಅಧಿಕೃತ ಗೆಝೆಟ್ ಆಗಿದೆ ವಾಯ್ನರ್‌ ಜ಼ಾಯ್ಟಂಗ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read