ನ್ಯೂ ಓರ್ಲಿಯನ್ಸ್: 71ನೇ ಮಿಸ್ ಯೂನಿವರ್ಸ್ ಸ್ಪರ್ಧೆ ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದಿದೆ. ಈ ಸ್ಪರ್ಧೆಗೂ ಮುನ್ನ ಹಲವು ಸುಂದರಿಯರು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಬಗೆಬಗೆ ಬಟ್ಟೆಗಳನ್ನು ಧರಿಸಿ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡಿದ್ದಾರೆ.
ಅವುಗಳಲ್ಲಿ ಈಗ ಗಮನ ಸೆಳೆದಿರುವುದು ಮಿಸ್ ಥಾಯ್ಲೆಂಡ್. ಥಾಯ್ಲೆಂಡ್ ಸುಂದರಿ ಅನ್ನಾ ಸುಯಾಂಗಮ್ ಆಕೆ ಧರಿಸುವ ಬಟ್ಟೆಯ ಮೂಲಕ ಬಹಳ ವೈರಲ್ ಆಗಿದ್ದಾಳೆ. ಅಷ್ಟಕ್ಕೂ ಈಕೆ ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲಾ ಸುದ್ದಿಯಾಗಲು ಕಾರಣ, ಈಕೆ ಧರಿಸಿರುವ ಗೌನ್.
ಕುಡಿದು ಬಿಸಾಡಿದ ಅಲ್ಯುಮಿನಿಯಂ ಕ್ಯಾನ್‌ಗಳನ್ನು ಮರುಬಳಸಿ ಸುಂದರವಾದ ಗೌನ್ ತಯಾರಿಸಿದ್ದು, ಇದನ್ನು ಆಕೆ ಧರಿಸಿಕೊಂಡಿದ್ದಾಳೆ.
ಜೊತೆಗೆ ಇದರ ಮಹತ್ವವನ್ನೂ ಆಕೆ ಹೇಳಿಕೊಂಡಿದ್ದಾಳೆ. ಅದೇನೆಂದರೆ ಈಕೆಯ ತಂದೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದ ಅವರ ಆ ಕೆಲಸದ ಸಂಬಳದಿಂದಲೇ ಮಕ್ಕಳನ್ನು ಬೆಳೆಸಿದ್ದಾರೆ. ಆದ್ದರಿಂದ ತಾನು ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಗೌನ್ ಧರಿಸಿ, ಮಿಸ್ ಯೂನಿವರ್ಸ್ನಲ್ಲಿ ಪ್ರತಿನಿಧಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನು ಕೇಳಿ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಕಸದಿಂದ ರಸ ಮಾಡಬಹುದು. ಪ್ರತಿಯೊಂದು ಕಸಕ್ಕೂ ತನ್ನದೇ ಆದ ಮೌಲ್ಯವಿದೆ ಎಂದು ಈ ಸುಂದರಿ ಬರೆದುಕೊಂಡು ವಿಶ್ವದ ಮನ ಗೆದ್ದಿದ್ದಾಳೆ.
https://twitter.com/thekimrlln/status/1613410400590245888?ref_src=twsrc%5Etfw%7Ctwcamp%5Etweetembed%7Ctwterm%5E1613410400590245888%7Ctwgr%5Ebba3347cf35de74df15a4e942113095761a110e3%7Ctwcon%5Es1_&ref_url=https%3A%2F%2Fwww.news18.com%2Fbuzz%2Fwhy-miss-universe-thailand-wore-a-gown-made-of-used-soda-can-pull-tabs-6824911.html
https://twitter.com/Iovemeharder/status/1613405716563333121?ref_src=twsrc%5Etfw%7Ctwcamp%5Etweetembed%7Ctwterm%5E161340571
https://twitter.com/PugzillaRex/status/1613695899053559808?ref_src=twsrc%5Etfw%7Ctwcamp%5Etweetembed%7Ctwterm%5E1613695899053559808%7Ctwgr%5Ebba3347cf35de74df15a4e942113095761a110e3%7Ctwcon%5Es1_&ref_url=https%3A%2F%2Fwww.news18.com%2Fbuzz%2Fwhy-miss-universe-thailand-wore-a-gown-made-of-used-soda-can-pull-tabs-6824911.html