ನೀಲಿ ಟಿಕ್ ಗುರುತು ವಾಪಸ್: ಎಲಾನ್ ಮಸ್ಕ್‌ರನ್ನು ಪ್ರಶ್ನಿಸಿದ ಬಿಜೆಪಿ ಸಂಸದ

ಖ್ಯಾತನಾಮರ ಟ್ವಿಟರ್‌ ಖಾತೆಗಳೊಂದಿಗೆ ಅಂಟಿಕೊಂಡಿದ್ದ ನೀಲಿ ಟಿಕ್ ಗುರುತುಗಳನ್ನು ಹಿಂಪಡೆಯಲು ನಿರ್ಧರಿಸಿದ ಮೈಕ್ರೋ ಬ್ಲಾಗಿಂಗ್ ದಿಗ್ಗಜ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಸಲೆಬ್ರಿಟಿಗಳು, ಮಾಧ್ಯಮ ಲೋಕದ ದಿಗ್ಗಜರು, ರಾಜಕಾರಣಿಗಳು, ಕ್ರೀಡಾಪಟುಗಳು ಸೇರಿದಂತೆ ಬಹಳಷ್ಟು ಮಂದಿ ತಮ್ಮ ಟ್ವಿಟರ್‌ ಹ್ಯಾಂಡಲ್‌ಗಳ ಮುಂದಿದ್ದ ಈ ಪ್ರತಿಷ್ಠಿತ ಗುರುತನ್ನು ಕಳೆದುಕೊಂಡಿದ್ದಾರೆ.

ಇದೇ ರೀತಿ ಟಿಕ್ ಮಾರ್ಕ್‌‌ಅನ್ನು ಕಳೆದುಕೊಂಡ ಬಿಜೆಪಿ ಸಂಸದ ರವಿ ಕಿಶನ್ ಸಹ ಅಚ್ಚರಿಗೀಡಾಗಿದ್ದಾರೆ. ಈ ಕುರಿತು ತಮ್ಮ ಅನಿಸಿಕೆಗಳನ್ನು ಟ್ವೀಟ್ ಮಾಡಿದ ರವಿ ಕಿಶನ್, ಎಲಾನ್ ಮಸ್ಕ್‌ರ ಪೋಸ್ಟ್ ಒಂದನ್ನು ಅದಕ್ಕೆ ಟ್ಯಾಗ್ ಮಾಡಿದ್ದಾರೆ.

ಲೆಬ್ರಾನ್ ಜೇಮ್ಸ್, ಸ್ಟೀಫನ್ ಕಿಂಗ್ ಹಾಗೂ ವಿಲಿಯಂ ಶಾಂಟರ್‌ಗೆ ಅಭಿನಂದನಾಪೂರ್ವಕವಾಗಿ ನೀಲಿ ಟಿಕ್ ಕೊಟ್ಟಿರುವುದಾಗಿ ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.

“ನನಗೇಕೆ…? ನೀಲಿ ಟಿಕ್ ಹೋಗಿಬಿಟ್ಟಿದೆ??????? ಮಿಸ್ಟರ್‌ ಮಸ್ಕ್‌????” ಎಂದು ಮಸ್ಕ್‌ರ ಟ್ವೀಟ್‌ಅನ್ನು ಕೋಟ್‌-ರೀಟ್ವೀಟ್ ಮಾಡಿದ್ದಾರೆ ರವಿ ಕಿಶನ್. ಕಿಶನ್‌ರ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರ ವಿನೋದಮಯ ಕಾಮೆಂಟ್‌ಗಳಿಗೆ ಪಾತ್ರವಾಗಿದೆ.

https://twitter.com/elonmusk/status/1649211324344201218?ref_src=twsrc%5Etfw%7Ctwcamp%5Etweetembed%7Ctwterm%5E1649211324344201218%7Ctwgr%5Edb18ae4a30d730c3d4fd405b48f9547f7798d238%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-me-mr-musk-ravi-kishan-tweets-after-losing-blue-tick-and-the-replies-will-make-you-go-rofl-2363021-2023-04-21

https://twitter.com/AchudanKumar/status/1649391681836584961?ref_src=twsrc%5Etfw%7Ctwcamp%5Etweetembed%7Ctwterm%5E1649391681836584961%7Ctwgr%5Edb18ae4a30d730c3d4fd405b48f9547f7798d238%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-me-mr-musk-ravi-kishan-tweets-after-losing-blue-tick-and-the-replies-will-make-you-go-rofl-2363021-2023-04-21

https://twitter.com/film_waala/status/1649374872131497985?ref_src=twsrc%5Etfw%7Ctwcamp%5Etweetembed%7Ctwterm%5E1649374872131497985%7Ctwgr%5Edb18ae4a30d730c3d4fd405b48f9547f7798d238%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhy-me-mr-musk-ravi-kishan-tweets-after-losing-blue-tick-and-the-replies-will-make-you-go-rofl-2363021-2023-04-21

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read