ALERT : ‘ಹೃದಯಾಘಾತ’ವಾದಾಗ ಏನು ಮಾಡಬೇಕು..? : ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ.!

ಬೆಂಗಳೂರು : ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಹೃದಯಾಘಾತದ ಪ್ರಕರಣಗಳಲ್ಲಿ ಗೋಲ್ಡನ್ ಅವರ್ ಏಕೆ ಮುಖ್ಯ.! ತಿಳಿಯಿರಿ ತೀವ್ರ ಹೃದಯಾಘಾತದ ಪ್ರಕರಣಗಳಲ್ಲಿ ಗೋಲ್ಡನ್ ಅವರ್ ಏಕೆ ಮುಖ್ಯ?

* ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ.

* ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.

* #STEMI ಉಪಕ್ರಮವು ಪ್ರಾಣಾಪಾಯವನ್ನು 80% ತಡೆಯುತ್ತದೆ.

* ತಕ್ಷಣದ ಇಸಿಜಿ ಮತ್ತು ಟೆನೆಸ್ಟೆಪ್ಲೇಸ್ ಚುಚ್ಚುಮದ್ದು (ರಕ್ತಹೆಪ್ಪುಗಟ್ಟುವಿಕೆ ಕರಗಿಸಲು) ಜೀವ ಉಳಿಸಲು ಸಹಕಾರಿಯಾಗುತ್ತದೆ.

CPR ನ 3 C ಗಳನ್ನು ನೆನಪಿಟ್ಟುಕೊಳ್ಳಿ..!

CHECK (ಪರಿಶೀಲಿಸಿ) : ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ.

CALL (ಕರೆ ಮಾಡಿ) : ಆಂಬುಲೆನ್ಸ್‌ಗೆ ತಕ್ಷಣವೇ ಕರೆ ಮಾಡಿ.

COMPRESS (ಒತ್ತಿರಿ) : ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ ಸಿಪಿಆರ್‌ ಪ್ರಾರಂಭಿಸಿ. ಅವರ ಎದೆಯನ್ನು 30 ಬಾರಿ ಒತ್ತಿರಿ ಮತ್ತು ವೈದ್ಯಕೀಯ ನೆರವು ಸಿಗುವವರೆಗೂ ನಿಲ್ಲಿಸದಿರಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read