ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆ, ಕಾಲುಂಗುರ ಧರಿಸುವುದೇಕೆ…..? ಇಲ್ಲಿದೆ ಅಚ್ಚರಿಗೊಳಿಸುವಂತಹ ಸತ್ಯ……!

ಬೆಳ್ಳಿಯ ಕಾಲುಂಗುರ ಮತ್ತು ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಪಾಲಿಗೆ ಮುತ್ತೈದೆತನದ ಸಂಕೇತವೆಂದು ಭಾವಿಸಲಾಗುತ್ತದೆ. ಕಾಲುಂಗುರಗಳು ಪಾದದ ಅಂದವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಭಾರತದ ಪ್ರಾಚೀನ ಜ್ಯೋತಿಷಿಗಳ ಪ್ರಕಾರ, ಬೆಳ್ಳಿ ಚಂದ್ರನಿಗೆ ಸಂಬಂಧಿಸಿದ್ದು.

ಬೆಳ್ಳಿಯು ಶಿವನ ಕಣ್ಣುಗಳಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಬೆಳ್ಳಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಬೆಳ್ಳಿಯ ಕಾಲುಂಗುರಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಆದರೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬೆಳ್ಳಿಯನ್ನು ಆರೋಗ್ಯದ ದೃಷ್ಟಿಯಿಂದ ಪರಿಗಣಿಸಲಾಗುತ್ತದೆ.

ಈ ದೇಶಗಳಲ್ಲಿ ಕಾಲುಂಗುರವನ್ನು ಧರಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಬೆಳ್ಳಿಯು ಪ್ರತಿಕ್ರಿಯಾತ್ಮಕ ಲೋಹ. ಅದು ಒಬ್ಬರ ದೇಹದಿಂದ ಬಿಡುಗಡೆಯಾದ ಶಕ್ತಿಯನ್ನು ದೇಹಕ್ಕೆ ಹಿಂತಿರುಗಿಸುತ್ತದೆ. ನಮ್ಮ ಹೆಚ್ಚಿನ ಶಕ್ತಿಯು ಕೈ ಮತ್ತು ಪಾದಗಳ ಮೂಲಕ ಬಿಡುಗಡೆಯಾಗುತ್ತದೆ. ಬೆಳ್ಳಿ, ಕಂಚು ಮುಂತಾದ ಲೋಹಗಳು ಇದಕ್ಕೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ.

ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಮರಳಿ ತರಲು ಸಹಾಯ ಮಾಡುತ್ತದೆ. ಅಂದರೆ, ಬೆಳ್ಳಿಯ ಉಂಗುರ, ಕಾಲ್ಗೆಜ್ಜೆಗಳು ದೇಹದ ಶಕ್ತಿ ಹೊರಹೋಗಲು ಬಿಡುವುದಿಲ್ಲ. ಆದ್ದರಿಂದ  ಕಾಲುಂಗುರಗಳನ್ನು ಧರಿಸುವುದರಿಂದ ಹೆಚ್ಚು ಶಕ್ತಿಯುತ ಮತ್ತು ಹೆಚ್ಚು ಸಕಾರಾತ್ಮಕತೆಯನ್ನು ಅನುಭವಿಸುತ್ತಾರೆ. ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಬೆಳ್ಳಿ ಭೂಮಿಯ ಶಕ್ತಿಯೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ.

ಆದರೆ ಚಿನ್ನವು ದೇಹದ ಶಕ್ತಿ ಮತ್ತು ಸೆಳವುಗಳೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದ, ಬೆಳ್ಳಿಯನ್ನು ಕಾಲುಂಗುರ ಮತ್ತು ಕಾಲ್ಗೆಜ್ಜೆಯಾಗಿ ಧರಿಸಲಾಗುತ್ತದೆ. ಚಿನ್ನದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನು ಧರಿಸುವ ಸಂಪ್ರದಾಯವಿಲ್ಲ. ದೇಹದ ಮೇಲಿನ ಭಾಗಗಳನ್ನು ಅಲಂಕರಿಸಲು ಚಿನ್ನವನ್ನು ಬಳಸಲಾಗುತ್ತದೆ.

ಬೆಳ್ಳಿ ತನ್ನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಗಾಗಿ ಗುರುತಿಸಲ್ಪಟ್ಟಿದೆ. ಸಾವಿರಾರು ವರ್ಷಗಳ ಹಿಂದೆ, ನಾವಿಕರು ದೀರ್ಘ ಪ್ರಯಾಣದ ವೇಳೆ ಬೆಳ್ಳಿ ನಾಣ್ಯಗಳನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ಆ ನಾಣ್ಯಗಳನ್ನು ನೀರಿನ ಬಾಟಲಿಗಳಲ್ಲಿ ಹಾಕುತ್ತಿದ್ದರು. ಬೆಳ್ಳಿ ಮಿಶ್ರಿತ ನೀರನ್ನು ಕುಡಿಯುತ್ತಿದ್ದರು. ಯಾಕಂದ್ರೆ ಅದು ಉತ್ತಮ ಸೋಂಕು ನಿವಾರಕವಾಗಿದೆ. ಬೆಳ್ಳಿ ಬ್ಯಾಕ್ಟೀರಿಯಾವನ್ನು ನಾಶ ಮಾಡುವ ಶಕ್ತಿ ಹೊಂದಿದೆ.

ಮಹಿಳೆಯರು ಅಡುಗೆ ಮನೆಯಲ್ಲಿ ಗಂಟೆಗಟ್ಟಲೆ ನಿಂತುಕೊಂಡೇ ಕೆಲಸ ಮಾಡ್ತಾರೆ. ಇದರಿಂದ ಕಾಲು ಹಾಗೂ ಬೆನ್ನು ನೋವು ಸಾಮಾನ್ಯ. ಬೆಳ್ಳಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಕಾಲುಗಳನ್ನು ದುರ್ಬಲಗೊಳಿಸಲು ಬಿಡುವುದಿಲ್ಲ. ಇಷ್ಟೇ ಅಲ್ಲ, ಬೆಳ್ಳಿಯ ಕಾಲುಂಗುರಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.  ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತವೆ.

ನಮ್ಮ ದೇಶದಲ್ಲಿ ವಿವಾಹಿತ ಮಹಿಳೆಯರು ಬೆಳ್ಳಿಯ ಕಾಲುಂಗುರ ಧರಿಸಲು ಇದೂ ಒಂದು ಕಾರಣ. ಜೊತೆಗೆ ಇದು ಗರ್ಭಾಶಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read