ಹುಡುಗರು ಯಾಕೆ ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ…..?

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು ಸುಳ್ಳು ಹೇಳೇ ಹೇಳ್ತಾರೆ.

ಆರಂಭದ ಮಾತುಕತೆ ವೇಳೆ ಹುಡುಗಿಯರ ಇಷ್ಟ ಕಷ್ಟಗಳನ್ನು ಕೇಳುವ ಹುಡುಗ್ರು ಸಂಗಾತಿ ಇಷ್ಟವನ್ನೇ ತಮ್ಮಿಷ್ಟವೆಂದು ಸುಳ್ಳು ಹೇಳ್ತಾರೆ. ಸಂಗಾತಿ ಇಷ್ಟದ ಬಣ್ಣವನ್ನು ಇವ್ರು ದ್ವೇಷ ಮಾಡುತ್ತಿದ್ದರೂ ನನಗೆ ಅದೇ ಬಣ್ಣ ಇಷ್ಟ ಎಂದು ಸುಳ್ಳು ಹೇಳ್ತಾರೆ.

ಬಹುತೇಕ ಹುಡುಗ್ರು ತಮ್ಮ ಹಳೆ ಕಥೆಯನ್ನ ಹೊಸ ಹುಡುಗಿ ಮುಂದೆ ಹೇಳಲು ಇಚ್ಛಿಸುವುದಿಲ್ಲ. ಹಳೆ ಹುಡುಗಿ ವಿಚಾರದಲ್ಲಿ ಹುಡುಗ್ರು ಸುಳ್ಳು ಹೇಳ್ತಾರೆ.

ಹುಡುಗಿಯರನ್ನು ಸೆಳೆಯಲು ಫಿಟ್ನೆಸ್ ಬಗ್ಗೆ ಹುಡುಗ್ರು ಸುಳ್ಳು ಹೇಳ್ತಾರೆ. ಅಷ್ಟು ವ್ಯಾಯಾಮ ಮಾಡ್ತೇನೆ, ಇಷ್ಟು ವ್ಯಾಯಾಮ ಮಾಡ್ತೇನೆ ಅಂತಾ ಹುಡುಗಿ ಮುಂದೆ ಬಡಾಯಿ ಕೊಚ್ಚಿಕೊಳ್ತಾರೆ.

ಸಂಬಳ ಹಾಗೂ ಕುಟುಂಬದ ಬಗ್ಗೆಯೂ ಕೆಲ ಹುಡುಗ್ರು ಸುಳ್ಳು ಹೇಳ್ತಾರೆ. ಸಂಬಳಕ್ಕಿಂತ ಹೆಚ್ಚು ಖರ್ಚು ಮಾಡಿ ಕೈ ಸುಟ್ಟುಕೊಳ್ಳುವ ಜೊತೆಗೆ ನಮ್ಮದು ಶ್ರೀಮಂತ ಮನೆತನ ಎನ್ನುತ್ತಾರೆ.

ಹುಡುಗಿಯರ ಸ್ನೇಹಿತರನ್ನು ಇಷ್ಟಪಡುವ ನಾಟಕವನ್ನು ಕೂಡ ಹುಡುಗ್ರು ಮಾಡ್ತಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read