ನೀಲಿ ಬಣ್ಣದಲ್ಲಿಯೇ ಡೆನಿಮ್‌ಗಳು ಫೇಮಸ್‌ ಆಗಿದ್ಯಾಕೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಡೆನಿಮ್‌ ಅಥವಾ ಜೀನ್ಸ್‌ ಬಹಳ ಫ್ಯಾಷನೇಬಲ್‌ ಉಡುಪುಗಳಲ್ಲೊಂದು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಡೆನಿಮ್‌ ಧರಿಸ್ತಾರೆ. ಕಂಫರ್ಟ್‌ ಜೊತೆಗೆ ಅದ್ಭುತವಾದ ಲುಕ್ ಕೂಡ ಇರುವ ಬಗೆ ಬಗೆಯ ಜೀನ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಇಷ್ಟೆಲ್ಲಾ ವೈವಿಧ್ಯತೆಯ ಹೊರತಾಗಿಯೂ ಸಾಮಾನ್ಯವಾಗಿ ಎಲ್ಲರೂ ಹೆಚ್ಚು ಇಷ್ಟಪಡುವುದು ಡೆನಿಮ್ ‘ಬ್ಲೂ’ ನ ಕ್ಲಾಸಿಕ್ ಬಣ್ಣ. ಪ್ರಾರಂಭದಲ್ಲಿ ಡೆನಿಮ್ ನೀಲಿ ಬಣ್ಣದಲ್ಲಿ ಮಾತ್ರ ಲಭ್ಯವಿತ್ತು. ಬಳಿಕ ಇತರ ಬಣ್ಣಗಳಲ್ಲಿ ಜೀನ್ಸ್‌ ಅನ್ನು ಪರಿಚಯಿಸಲಾಯ್ತು.

ಆರಂಭದಲ್ಲಿ ನೀಲಿ ಬಣ್ಣವನ್ನು ನೈಸರ್ಗಿಕ ಇಂಡಿಗೊ ಬಣ್ಣದಿಂದ ಪಡೆಯಲಾಗುತ್ತಿತ್ತು, ಅದು ಹತ್ತಿಯೊಂದಿಗೆ ಉತ್ತಮವಾಗಿ ಪ್ರತಿಕ್ರಿಯಿಸಿದ ಕಾರಣ, ಅದನ್ನು ಆರಿಸಲಾಯಿತು.

ಡೈಯಿಂಗ್ ಸಮಯದಲ್ಲಿ ಇತರ ಬಣ್ಣಗಳು ಫೈಬರ್ ಮೂಲಕ ಹಾದುಹೋದವು, ಆದರೆ ನೀಲಿ ಬಣ್ಣವು ಫೈಬರ್‌ಗೆ ಅಂಟಿಕೊಂಡಿತ್ತು. ನೀಲಿ ಬಣ್ಣವು ಜೀನ್ಸ್‌ಗೆ ಅಂಟಿಕೊಂಡಿದ್ದರೂ ತೊಳೆದ ನಂತರ ಕೆಲವು ಅಣುಗಳು ಮತ್ತು ಡೈ ಫೈಬರ್‌ಗಳು ಹೊರಹೋಗಲು ಪ್ರಾರಂಭಿಸಿದವು.  ಇದರಿಂದಾಗಿ ಜೀನ್ಸ್‌ನ ಮಾದರಿಯೊಂದು ಸೃಷ್ಟಿಯಾಯಿತು.

ಜೀನ್ಸ್‌ ಒಂದು ಬದಿಯಲ್ಲಿ ನೀಲಿ ಮತ್ತು ಇನ್ನೊಂದು ಬದಿಯಲ್ಲಿ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೆರೈಟಿ ಡೆನಿಮ್‌ಗಳು ಲಭ್ಯವಿವೆ. ಕಪ್ಪು, ಬಿಳಿ, ನೀಲಿ, ಬೂದು ಬಣ್ಣ ಹೀಗೆ ಹತ್ತಾರು ಕಲರ್‌ಗಳಲ್ಲಿ ಡೆನಿಮ್‌ಗಳನ್ನು ಪರಿಚಯಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read