“ನನ್ನನ್ನು ಅಪರಾಧಿಯಂತೆ ಏಕೆ ನಡೆಸಿಕೊಳ್ಳುತ್ತಿದ್ದೀರಿ ? ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗಚೈತನ್ಯ ಪ್ರಶ್ನೆ

ನಟಿ ಸಮಂತಾ ರುತ್ ಪ್ರಭು ಅವರೊಂದಿಗಿನ ವಿಚ್ಛೇದನದ ಬಗ್ಗೆ ನಟ ನಾಗಚೈತನ್ಯ ಇದೀಗ ಮೌನ ಮುರಿದಿದ್ದಾರೆ. “ನನ್ನನ್ನು ಅಪರಾಧಿಯಂತೆ ಏಕೆ ನಡೆಸಿಕೊಳ್ಳುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಮಂತಾ ಅವರೊಂದಿಗಿನ ವಿಚ್ಛೇದನವು ‘ಗುಸುಗುಸುವಿನ ವಿಷಯ’ವಾಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2021 ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು.

“ನಾವು ನಮ್ಮದೇ ದಾರಿಗಳಲ್ಲಿ ಸಾಗಲು ಬಯಸಿದ್ದೆವು. ನಮ್ಮದೇ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ನಾವು ಪರಸ್ಪರರನ್ನು ಗೌರವಿಸುತ್ತೇವೆ. ನಾವು ನಮ್ಮ ಜೀವನದಲ್ಲಿ, ನಮ್ಮದೇ ರೀತಿಯಲ್ಲಿ ಮುಂದುವರಿಯುತ್ತಿದ್ದೇವೆ. ಹೆಚ್ಚಿನ ವಿವರಣೆ ಏನು ಬೇಕು, ನನಗೆ ಅರ್ಥವಾಗುತ್ತಿಲ್ಲ. ಪ್ರೇಕ್ಷಕರು ಮತ್ತು ಮಾಧ್ಯಮಗಳು ಇದನ್ನು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಗೌಪ್ಯತೆ ಕಾಪಾಡುವಂತೆ ನಾವು ಕೇಳಿಕೊಂಡಿದ್ದೇವೆ. ಈ ವಿಷಯದಲ್ಲಿ ನಮ್ಮನ್ನು ಗೌರವಿಸಿ ಮತ್ತು ನಮಗೆ ಗೌಪ್ಯತೆ ನೀಡಿ. ಆದರೆ, ದುರದೃಷ್ಟವಶಾತ್, ಇದು ಶೀರ್ಷಿಕೆಯಾಯಿತು. ಇದು ಗುಸುಗುಸುವಿನ ವಿಷಯವಾಯಿತು. ಇದು ಮನರಂಜನೆಯಾಯಿತು” ಎಂದು ನಾಗಚೈತನ್ಯ ಹೇಳಿದ್ದಾರೆ.

“ನಾನು ಮುರಿದ ಕುಟುಂಬದ ಮಗು” ಎಂದು ಹೇಳಿದ 38 ವರ್ಷದ ನಟ, ವಿಚ್ಛೇದನವು ತನಗೆ ‘ಸೂಕ್ಷ್ಮ’ ವಿಷಯವಾಗಿದೆ. ತಾವಿಬ್ಬರೂ ಬಹಳ ಆಲೋಚಿಸಿ ಬೇರೆಯಾಗಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ.

ನಾಗಚೈತನ್ಯ ಮತ್ತು ಸೋಭಿತಾ ಧುಲಿಪಾಲ ಅವರ ಮದುವೆ 2024 ರ ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದಿದೆ. ಹಲವಾರು ವರ್ಷಗಳ ಕಾಲ ಪ್ರೀತಿಸಿದ ನಂತರ ಅವರು ಮದುವೆಯಾದರು.

“ನಾನು ಬಹಳ ಗೌರವದಿಂದ ಮುಂದುವರಿದಿದ್ದೇನೆ. ಅವಳೂ ಕೂಡ ಗೌರವಿಸುತ್ತಾಳೆ. ನಾವು ನಮ್ಮದೇ ಜೀವನವನ್ನು ನಡೆಸುತ್ತಿದ್ದೇವೆ. ನಾನು ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನಾವು ಪರಸ್ಪರರಿಗೆ ತುಂಬಾ ಗೌರವವನ್ನು ಹೊಂದಿದ್ದೇವೆ” ಎಂದು ನಾಗಚೈತನ್ಯ ಹೇಳಿದ್ದಾರೆ.

 

View this post on Instagram

 

A post shared by Sobhita (@sobhitad)

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read