’ಕೋಟ್ಯಂತರ ಮೌಲ್ಯದ ಆಧ್ಯಾತ್ಮಿಕತೆ ಬಿಟ್ಟು ಹತ್ರುಪಾಯಿಯ ರಾಜಕಾರಣಕ್ಕೆ ಬರಲಾರೆ’: ಧರ್ಮಗುರು ಧೀರೇಂದ್ರ ಶಾಸ್ತ್ರಿ

ತಮಗೆ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಸ್ವಘೋಷಿ ಧರ್ಮಗುರು ಧೀರೇಂದ್ರ ಕೃಷ್ಣಾ ಶಾಸ್ತ್ರಿ, “ಕೋಟ್ಯಾಂತರ ರೂ. ಮೌಲ್ಯದ ಆಧ್ಯಾತ್ಮಿಕತೆಯನ್ನು ಬಿಟ್ಟು 10ರೂ. ಮೌಲ್ಯದ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ,” ಎಂದಿದ್ದಾರೆ.

ವಡೋದರಾ ಬಿಜೆಪಿಯ ಅಧ್ಯಕ್ಷ ವಿಜಯ್‌ ಶಾ ಜೊತೆಗೆ ಸದಾ ಕಾಣಿಸಿಕೊಳ್ಳುವ ತಾವು ಸಕ್ರಿಯ ರಾಜಕರಾಣದಲ್ಲಿ ಸೇರುವ ವದಂತಿಗಳನ್ನು ಅಲ್ಲಗಳೆದಿರುವ ಶಾಸ್ತ್ರಿ, ಇದೇ ವೇಳೆ ಹಿಂದೂ ರಾಷ್ಟ್ರ ನಿರ್ಮಾಣದ ಕುರಿತು ತಮ್ಮ ನಿಲುವು ಮಾತ್ರ ಬದಲಾಗದು ಎಂದಿದ್ದಾರೆ.

ತಮ್ಮನ್ನು ಕೆಲ ವರ್ಗಗಳು ’ಗುಜರಾತಿನ ಹುಚ್ಚ’ ಎಂದು ಕರೆಯುವುದರ ಹಿಂದೆ ತಮ್ಮ ಕುರಿತಾದ ತಪ್ಪಾದ ಅರ್ಥೈಸುವಿಕೆ ಇದೆ ಎನ್ನುವ ಶಾಸ್ತ್ರಿ, “ಹುಚ್ಚ ಎಂದರೆ ಮಾನಸಿಕ ರೋಗ ಇರುವವ ಎಂದು ನಾನು ಭಾವಿಸುವುದಿಲ್ಲ. ಏನಾದರೊಂದು ವಿಚಾರದ ಕುರಿತು ಆಳವಾದ ಆಸಕ್ತಿ ಹೊಂದಿರುವುದು ಸಹ ಹುಚ್ಚುತನ. ಹೀಗಾಗಿ, ಗುಜರಾತ್‌ ಜನರಿಗೆ ಆಧ್ಯಾತ್ಮಿಕತೆ ಬಗ್ಗೆ ಒಲವಿದ್ದರೆ ಅವರನ್ನು ಹುಚ್ಚರು ಎನ್ನಲು ಇಚ್ಛಿಸುತ್ತೇನೆ. ಈ ಪದದ ಕುರಿತು ಸಮಸ್ಯೆ ಹೊಂದಿರುವವರು ಹುಚ್ಚ ಎಂದರೆ ಮೆಂಟಲ್ ಸಮಸ್ಯೆಯವನು ಎಂದೇ ಭಾವಿಸಬಹುದು,” ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read