ನೀವು ಉದ್ದ ಇದ್ದೀರಾ ಅಥವಾ ಕುಳ್ಳಗಿದ್ದಿರಾ ಎಂಬುದರ ಮೇಲೂ ನಿಮ್ಮ ದೇಹ ತೂಕ ಇಳಿಸುವುದು ನಿರ್ಧಾರವಾಗುತ್ತದೆ ಎನ್ನುತ್ತಾರೆ ತಜ್ಞರು. ಹೇಗೆನ್ನುತ್ತೀರಾ?
ನೀವು ಯಾವ ರೀತಿಯ ಡಯಟ್ ಪ್ಲಾನ್ ಮಾಡಿದ್ದರೂ ನೀವು ಉದ್ದವಿದ್ದರೆ ನಿಮ್ಮ ತೂಕ ಬೇಗ ಕಡಿಮೆಯಾಗುತ್ತದೆ. ಅದೇ ನೀವು ಕುಳ್ಳಗಿದ್ದರೆ ನಿಮ್ಮ ತೂಕ ನಿಧಾನವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಪರಿಣತರು. ಹಾಗಾಗಿ ಕಡಿಮೆ ಉದ್ದ ಇರುವವರು ಈ ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ದೇಹ ತೂಕ ಕಡಿಮೆ ಮಾಡಬಹುದು.
ಮೊದಲು ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರಕ್ಕೆ ಒಗ್ಗಿಕೊಳ್ಳಿ. ಯಾವುದನ್ನೂ ಅತಿಯಾಗಿ ಸೇವಿಸದಿರಿ. ಜಂಕ್ ಫುಡ್ ನಿಂದ ಸಾಧ್ಯವಾದಷ್ಟು ದೂರವಿರಿ. ತೂಕವನ್ನು ಎತ್ತುವ ವ್ಯಾಯಾಮಕ್ಕೆ ಹೆಚ್ಚಿನ ಒತ್ತು ನೀಡಿ. ಇದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ.
ಹೆಚ್ಚಿನ ಪ್ರೊಟೀನ್ ಹೊಂದಿರುವ ಆಹಾರಗಳನ್ನು ಸೇವಿಸಿ. ಪೋಷಕಾಂಶಯುಕ್ತ ಆಹಾರ ಸೇವಿಸಿ, ನಿಮ್ಮ ದೇಹ ತೂಕ ಇಳಿಸಿಕೊಳ್ಳಿ.