ಕೊಲೆಯಾದ ನಟ ದರ್ಶನ್ ಅಭಿಮಾನಿ ‘ರೇಣುಕಾಸ್ವಾಮಿ’ ಯಾರು..? ಆತನ ಹಿನ್ನೆಲೆ ಏನು..?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಹಲವರನ್ನು ಬಂಧಿಸಲಾಗಿದೆ.

ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವರಾಗಿದ್ದು, ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು.
ರೇಣುಕಾ ಸ್ವಾಮಿ ಬೆಸ್ಕಾಂ ನಿವೃತ್ತ ನೌಕರ ಶಿವನಗೌಡ-ರತ್ನಪ್ರಭಾ ದಂಪತಿ ಪುತ್ರನಾಗಿದ್ದರು. ಕೊಲೆಯಾದ ರೇಣುಕಾ ಸ್ವಾಮಿ ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಕೂಡ ಆಗಿದ್ದರು.

ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಣುಕಾಸ್ವಾಮಿ ಇದೀಗ ಕೊಲೆ ಆಗಿ ಹೋಗಿದ್ದಾರೆ. ರೇಣುಕಾಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ದರ್ಶನ್ ಅಪ್ಪಟ ಅಭಿಮಾನಿಯಾಗಿದ್ದು, ದರ್ಶನ್ ಸಂಸಾರದಲ್ಲಿ ಪವಿತ್ರಾ ಗೌಡ ಪ್ರವೇಶವನ್ನು ಸಹಿಸದ ರೇಣುಕಾಸ್ವಾಮಿ ಬಹಳ ಬೇಸರಗೊಂಡಿದ್ದನು. ನಮ್ಮ ಡಿ ಬಾಸ್ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗುತ್ತಿದೆ ಎಂಬುದನ್ನು ತಿಳಿದು ಬೇಸರಗೊಂಡಿದ್ದ ಅಭಿಮಾನಿ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸೋಷಿಯಲ್ ಮೀಡಿಯಾದಲ್ಲಿ ಬೈದಿದ್ದನು ಎನ್ನಲಾಗಿದೆ. ಈ ಘಟನೆ ಕೊನೆಗೆ ಕೊಲೆ ಹಂತಕ್ಕೆ ಹೋಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read