ಯಾರೀಕೆ ಬಿಟೆಕ್ ಪಾನಿಪೂರಿ ವಾಲಿ…..?

ಬಿಟೆಕ್ ಪಾನಿಪುರಿ ವಾಲಿ ಎಂದೇ ಖ್ಯಾತಳಾಗಿರುವ ದೆಹಲಿಯ 21ರ ಹರೆಯದ ಯುವತಿಯೊಬ್ಬರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ನಿಮ್ಮ ಕನಸನ್ನು ನನಸಾಗಿಸುವ ಅದಮ್ಯ ಬದ್ಧತೆ ನಿಮಗಿದ್ದಲ್ಲಿ ಯಾರಿಂದಲೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಸಾಬೀತು ಮಾಡಿರುವ ತಾಪ್ಸಿ ಉಪಾಧ್ಯಾಯ ಬಿಟೆಕ್ ಪಾನಿ ಪುರಿ ವಾಲಿಯಾಗಿದ್ದಾರೆ.

ತಮ್ಮ ಪಾನಿ ಪುರಿ ಗಾಡಿಯನ್ನು ರಾಯಲ್ ಎನ್‌ಫೀಲ್ಡ್‌ ಮೋಟರ್‌ಬೈಕ್‌ಗೆ ತಗುಲು ಹಾಕಿಕೊಂಡು ಸುತ್ತಾಡುವ ತಾಪ್ಸಿ ದೆಹಲಿಯ ತಿಲಕ್ ನಗರದಲ್ಲಿ ತಮ್ಮ ಗೋಲ್ಗಪ್ಪಾ ಸ್ಟಾಲ್ ಇಟ್ಟುಕೊಂಡಿದ್ದಾರೆ.

ಬಿಟೆಕ್ ಪದವಿ ಪೂರೈಸುತ್ತಲೇ ಈ ಉದ್ಯಮಕ್ಕೆ ಕಾಲಿಟ್ಟಿದ್ದಾರೆ ತಾಪ್ಸಿ. ಸಾರ್ವಜನಿಕರಿಗೆ ಆರೋಗ್ಯಕರ ಚಾಟ್‌ ತಿನಿಸುಗಳನ್ನು ಉಣಬಡಿಸುವ ಇಚ್ಛೆಯೊಂದಿಗೆ ತಾಪ್ಸಿ ಗಾಳಿಯಲ್ಲಿ ಹುರಿದ (ಏರ್‌ ಫ್ರೈಡ್) ಪೂರಿ, ಮನೆಯಲ್ಲೇ ಮಾಡಿದ ಮಸಾಲೆ ಪುಡಿಗಳು ಹಾಗೂ ಹುಣಸೆ ಹಣ್ಣು, ಬೆಲ್ಲ, ಖರ್ಜೂರಗಳನ್ನು ಬಳಸಿ ತಯಾರಿಸಿದ ಚಟ್ನಿಗಳೊಂದಿಗೆ ಚಾಟ್‌ಗಳನ್ನು ಮಾಡಿ ವಿತರಿಸುತ್ತಿದ್ದಾರೆ.

ಈಕೆಯ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು ಹತ್ತು ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.

https://www.youtube.com/watch?v=4kZz-dXXC90

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read