ತುಮಕೂರು: ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ರೆಸಾರ್ಟ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 25 ಪ್ರವಾಸಿಗರು ಮತ್ತು ಸ್ಥಳೀಯ ಮಾರ್ಗದರ್ಶಿಯನ್ನು ಗುಂಡಿಕ್ಕಿ ಕೊಂದಿದ್ದು, ಇಡೀ ದೇಶವೇ ಶೋಕಾಚರಣೆಯಲ್ಲಿದೆ.
ಹೀಗೆ ದೇಶವೇ ಶೋಕಾಚರಣೆಯಲ್ಲಿರುವಾಗ ಇನ್ಸ್ಪೆಕ್ಟರ್ ಸಂಭ್ರಮಾಚರಣೆ ನಡೆಸಿದ್ದಾರೆ. ತುಮಕೂರು ಸಿಪಿಐ ಬಿ.ಎಸ್. ದಿನೇಶ್ ಕುಮಾರ್ ಸಂಭ್ರಮಾಚರಣೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ತುಮಕೂರಿನಿಂದ ಕುಶಾಲನಗರಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆರೆದ ಜೀಪಿನಲ್ಲಿ ಸಿಪಿಐ ರ್ಯಾಲಿ ಮಾಡಿ ರೋಡ್ ಶೋ ನಡೆಸಿದ್ದಾರೆ. ಕ್ರೇನ್ ನಲ್ಲಿ ಹಾರ ಹಾಕಿಸಿಕೊಂಡು ಬಿ.ಎಸ್. ದಿನೇಶ್ ರೋಡ್ ಶೋ ಮಾಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.