ರಾಜ್ಯದಲ್ಲಿ ಖಾಯಿಲೆಗಳು ಮರಣ ಮೃದಂಗ ಬಾರಿಸುತ್ತಿದ್ರೂ, ಆರೋಗ್ಯ ಸಚಿವರು ಈಜುಕೊಳದಲ್ಲಿ ತೇಲಾಡ್ತಿದ್ದಾರೆ ; ಬಿಜೆಪಿ ಕಿಡಿ

ಬೆಂಗಳೂರು : ಖಾಯಿಲೆಗಳು ಮರಣ ಮೃದಂಗ ಬಾರಿಸುತ್ತಿದ್ರೂ,ಆರೋಗ್ಯ ಸಚಿವರು ಈಜುಕೊಳದಲ್ಲಿ ತೇಲಾಡ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಟ್ವೀಟ್ ಮಾಡಿರುವ ಬಿಜೆಪಿ ನಗರಗಳೆಲ್ಲಾ ಕೊಚ್ಚೆ, ಕೊಳಚೆಯಿಂದ ನಾರಿ ಡೆಂಗ್ಯೂ, ಮಲೇರಿಯಾದಂತಹ ಖಾಯಿಲೆಗಳು ಮರಣ ಮೃದಂಗ ಬಾರಿಸುತ್ತಿದ್ದರೂ, ಬಡವರ ಪರ ಕಾಂಗ್ರೆಸ್ ಸರ್ಕಾರ ಸ್ವಚ್ಛ ಈಜುಕೊಳದಲ್ಲಿ ತೇಲಾಡುತ್ತಿದೆ. ನೀರಿನಲ್ಲಿ ಆರೋಗ್ಯ ಇಲಾಖೆಯ ನೀರೋ ರಾವ್ ಎಂದು ಬಿಜೆಪಿ ಕಿಡಿಕಾರಿದೆ.

ರಾಜ್ಯಾದ್ಯಂತ ಡೆಂಗ್ಯೂ ತಾಂಡವವಾಡುತ್ತಿದ್ದು ದಿನೇ ದಿನೇ ಪ್ರಕರಣಗಳ ಸಂಖ್ಯೆ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕರಣಗಳು ವರದಿಯಾಗುತ್ತಿದ್ದರೂ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರುಗಳು ಮೌನ!! ಇನ್ನು ಸಿಎಂ ಅವರು ಹಾಗೂ ಡಿಸಿಎಂಅವರಂತೂ ಕುರ್ಚಿ ಕಚ್ಚಾಟದಲ್ಲಿ ಬ್ಯುಸಿ. ಸರ್ಕಾರ ಅಧಿಕಾರದಲ್ಲಿರುವ ಕಾರಣ ಕನ್ನಡಿಗರು ಇನ್ನಿಲ್ಲದಂತಹ ಸಂಕಷ್ಟವನ್ನು ಎದುರಿಸಬೇಕಾಗಿದೆ. ಎಂದು ಬಿಜೆಪಿ ಕಿಡಿಕಾರಿದೆ.

https://twitter.com/BJP4Karnataka/status/1809513162816840144

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read