ಛೇ..ಮನುಷ್ಯರೋ ರಾಕ್ಷಸರೋ..! ರೇಣುಕಾ ಸ್ವಾಮಿ ಗುಪ್ತಾಂಗಕ್ಕೆ ಒದ್ದು, ಚಿತ್ರಹಿಂಸೆ ನೀಡಿ ಕೊಂದ ಹಂತಕರು..!

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಪ್ರಕರಣ ಸಂಬಂಧ ನಟ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.

ಸದ್ಯ, ರೇಣುಕಾ ಸ್ವಾಮಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಂತ ಕಳುಹಿಸಲಾಗಿದ್ದು, ಪೋಸ್ಟ್ ಮಾರ್ಟಮ ರಿಪೋರ್ಟ್ ಸದ್ಯದಲ್ಲೇ ಪೊಲೀಸರ ಕೈ ಸೇರಲಿದೆ.

ಗುಪ್ತಾಂಗಕ್ಕೆ ಒದ್ದು, ಕಬ್ಬಿಣದ ಸಲಾಕೆಯಿಂದ ದೇಹ ಸುಟ್ಟ ಹಂತಕರು..!

ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ನರಕಯಾತನೆಗೆ ಒಳಪಡಿಸಿ ವಿಕೃತಿಯಾಗಿ ಟಾರ್ಚರ್ ನೀಡಿ ಆರೋಪಿಗಳು ಕೊಲೆ ಮಾಡಿದ್ದಾರೆ.

ರೇಣುಕಾ ಸ್ವಾಮಿ ತಲೆ, ಮುಖ ಎದೆಗೆ ಹಲ್ಲೆ ಮಾಡಲಾಗಿದೆ. ಗುಪ್ತಾಂಗಕ್ಕೆ ಬಲವಾಗಿ ಒದ್ದು, ಕಾದ ಕಬ್ಬಿಣದ ಸಲಾಕೆಯಿಂದ ಕೈ ಸೇರಿದಂತೆ ದೇಹದ ಹಲವು ಭಾಗಗಳನ್ನು ಸುಟ್ಟು ರಾತ್ರಿಯಿಡೀ ನಿರಂತರ ಚಿತ್ರಹಿಂಸೆ ನೀಡಿದ್ದಾರೆ. ಹಂತಕರ ಚಿತ್ರಹಿಂಸೆ ತಾಳಲಾರದೇ ಪ್ರಾಣಬಿಟ್ಟ ರೇಣುಕಾ ಸ್ವಾಮಿಯನ್ನು ರಾಜಕಾಲುವೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ( ಕೊಲೆಯಾದ ವ್ಯಕ್ತಿ) ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದನು ಎನ್ನಲಾಗಿದೆ. ಪವಿತ್ರ ಗೌಡ ಕೂಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ನಂತರ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ನಂತರ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ ಶೆಡ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ. ನಾಲ್ಕು ಮಂದಿ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿದ್ದು, ಈ ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read