ನನ್ನನ್ನು ತಲೆ ಕೆಟ್ಟವನು ಅಂದ ಈಶ್ವರಪ್ಪನವರ ತಲೆ ಯಾವಾಗ ಸರಿ ಇತ್ತು; ಆಯನೂರು ಮಂಜುನಾಥ್ ಟಾಂಗ್

ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದ್ದೇನೆ: ಆಯನೂರು ಮಂಜುನಾಥ್- Kannada Prabha

ಆಯನೂರು ಮಂಜುನಾಥ್ ತಲೆ ಕೆಟ್ಟಿದೆ ಎಂದು ತಮ್ಮ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಮಾಜಿ ಸಚಿವ ಈಶ್ವರಪ್ಪನವರಿಗೆ ಟಾಂಗ್ ನೀಡಿರುವ ಆಯನೂರು ಮಂಜುನಾಥ್, ಈಶ್ವರಪ್ಪನವರ ತಲೆ ಯಾವಾಗ ಸರಿ ಇತ್ತು ಎಂದು ವ್ಯಂಗ್ಯವಾಡಿದ್ದಾರೆ.

ಶನಿವಾರದಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಈಶ್ವರಪ್ಪ ಸಂವಿಧಾನವನ್ನೂ ಓದಿಲ್ಲ, ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆಯೂ ಇಲ್ಲ. ಬಾಯಿಗೆ ಬಂದಂತೆ ಮಾತನಾಡುವುದನ್ನೇ ಪ್ರತಿಭೆ ಎಂದು ಭಾವಿಸಿದ್ದಾರೆ ಎಂದು ತಿರುಗೇಟು ನೀಡಿದರು.

ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಲು ಈಶ್ವರಪ್ಪ ಏನು ನ್ಯಾಯಾಧೀಶರೇ ಎಂದು ಪ್ರಶ್ನಿಸಿದ ಆಯನೂರು ಮಂಜುನಾಥ್, ಸಿದ್ದರಾಮಯ್ಯನವರು ಈ ಹಿಂದೆ ಹೇಳಿದಂತೆ ಈಶ್ವರಪ್ಪನ ಮೆದುಳಿಗೂ ನಾಲಿಗೆಗೂ ಸಂಪರ್ಕವಿಲ್ಲ ಎಂಬುದನ್ನು ಪದೇಪದೇ ಸಾಬೀತು ಪಡಿಸುತ್ತಿದ್ದಾರೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read