ಬೆಂಗಳೂರು : ಕಾರಿನಲ್ಲಿ ಪ್ರಯಾಣಿಸುವಾಗ ಸನ್ ರೂಫ್ ತೆರೆದು ನಿಲ್ಲದಿರಿ, ಮಕ್ಕಳ ಬಗ್ಗೆ ಜಾಗರೂಕತೆ ವಹಿಸಿ ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನಲ್ಲಿ ಅವಘಡ
ಓರ್ವ ವ್ಯಕ್ತಿ ತನ್ನ ಐಷಾರಾಮಿ ಕಾರಿನಲ್ಲಿ ತೆರಳುತ್ತಿದ್ದಾಗ ಸನ್ ರೂಫ್ ಓಪನ್ ಮಾಡಿ ಮಗನನ್ನು ನಿಲ್ಲಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಮಗ ಸನ್ ರೋಫ್ ನಲ್ಲಿ ನಿಂತು ಗಾಳಿಯನ್ನು ಆಹ್ಲಾದಿಸುತ್ತಾ ಸಂತೋಷದಲ್ಲಿ ತೇಲುತ್ತಿದ್ದ ವೇಳೆ ಏಕಾಏಕಿ ಕಬ್ಬಿಣದ ಬೀಮ್ ಬಾಲಕನ ತಲೆಗೆ ಬಡಿದಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ.
ಕೆಂಪು ಬಣ್ಣದ ಕಾರಿನಲ್ಲಿ ಸನ್ ರೂಫ್ ಓಪನ್ ಮಾಡಿ ಎದ್ದು ನಿಂತಿದ್ದ ಬಾಲಕನ ತಲೆಗೆ ಕಬ್ಬಿಣದ ಕಮಾನಿನ ಬೀಮ್ ಬಡಿದ ಪರಿಣಾಮ ಬಾಲಕ ಕಾರಿನಲ್ಲಿಯೇ ಕುಸಿದು ಬಿದ್ದಿದ್ದಾನೆ. ಬಾಲಕನ ತಲೆಗೆ ಗಂಭೀರವಾದ ಗಾಯಗಳಾಗಿವೆ.ಪೋಷಕರಾಗಲಿ ಯಾರೇ ಆಗಲಿ ಮೋಜು-ಮಸ್ತಿಗೆಂದು ಸನ್ ರೂಫ್ ತೆಗೆದು ಮಕ್ಕಳನ್ನು ನಿಲ್ಲಿಸಿ ವಾಹನ ಚಲಾಯಿಸುವಾಗ ಇಂತಹ ಅನಾಹುತಗಳ ಬಗ್ಗೆ ಎಚ್ಚರವಹಿಸಬೇಕು.
TAGGED:ಸನ್ ರೂಫ್