ಹೀಗೊಂದು ವಿಚಿತ್ರ ಮದುವೆ…! ಗಂಡು ಬೇಡವೆಂದು ಹಾಸಿಗೆ ವರಿಸಿದ ಮಹಿಳೆ

ಕೆಲವರು ವಿಚಿತ್ರ ರೀತಿಯಲ್ಲಿ ಹೆಸರು ಮಾಡುತ್ತಾರೆ. ಹಿಂದೊಮ್ಮೆ ತನ್ನನ್ನು ತಾನೇ ಮದುವೆಯಾಗಿ ಯುವತಿಯೊಬ್ಬಳು ಸುದ್ದಿ ಮಾಡಿದ್ದರೆ, ಪ್ರಾಣಿಗಳನ್ನು ಮದುವೆಯಾಗಿ ಸುದ್ದಿ ಮಾಡಿದವರೂ ಇದ್ದಾರೆ. ಇದೀಗ ಮಹಿಳೆ ತನ್ನ ತುಪ್ಪಳದ ಹಾಸಿಗೆಯನ್ನೇ ಮದುವೆಯಾಗಿದ್ದಾಳೆ !

49 ವರ್ಷದ ಪಾಸ್ಕಲ್ ಸೆಲ್ಲಿಕ್ ತನ್ನ ಹಾಸಿಗೆಯನ್ನು ಮದುವೆಯಾಗಲು ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದಳು. ಮದುವೆಯನ್ನು ಆಚರಿಸಲು ಅವಳು ಮದುವೆಯ ಯೋಜಕನನ್ನು ಸಹ ನೇಮಿಸಿಕೊಂಡಿದ್ದರು. ಅತಿಥಿಗಳಿಗೂ ಆಹ್ವಾನ ನೀಡಿದ್ದಳು.

ತನ್ನ ನಿರ್ಧಾರದ ಬಗ್ಗೆ ಮಾತನಾಡಿರುವ ಪಾಸ್ಕಲ್​, ನನಗೆ ಬೇರೆ ಯಾರ ಮೇಲೂ ನಂಬಿಕೆ ಇಲ್ಲ. ಅನೇಕ ವರ್ಷಗಳಿಂದ ನನ್ನ ನಿಕಟವಾಗಿ ಇದ್ದುದು ಹಾಗೂ ಅತ್ಯಂತ ವಿಶ್ವಾಸಾರ್ಹ ಸಂಬಂಧವಾಗಿರುವುದು ಈ ಹಾಸಿಗೆ ಮಾತ್ರ. ಅದಕ್ಕಿಂತ ದೊಡ್ಡ ಅಪ್ಪುಗೆಯನ್ನು ಯಾರೂ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ.

ಮದುವೆಗೆ ಜನರೂ ಬಂದಿದ್ದರು. ಸಾಮಾನ್ಯ ಮದುವೆಯಂತೆ ಸಂಗೀತ ಮತ್ತು ಸಮಾರಂಭ, ನಗು ಮತ್ತು ಮನರಂಜನೆ ಇತ್ತು. 2019ರಲ್ಲಿ ನಡೆದ ಈ ಮದುವೆಯ ಬಗ್ಗೆ ಈಗ ಮತ್ತೆ ಸುದ್ದಿ ವೈರಲ್​ ಆಗುತ್ತಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read