ಮದ್ಯ, ಕಾಂಡೋಮ್ ಜೊತೆಗಿಬ್ಬರು ಯುವತಿಯರು: ಪತ್ನಿ ಕೈಗೆ ʼರೆಡ್‌ ಹ್ಯಾಂಡ್‌ʼ ಆಗಿ ಸಿಕ್ಕಿಬಿದ್ದ ಪತಿ !

ಒಡಿಶಾದ ಭುವನೇಶ್ವರದ ಪಟಿಯಾ ಪ್ರದೇಶದ ಒಂದು ಹೋಟೆಲ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯು ತನ್ನ ಪತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದು, ಆಕೆಯ ಅನುಮಾನವು ನಿಜವಾಗಿದೆ ಎಂದು ಸಾಬೀತಾಗಿದೆ. ಈ ಘಟನೆಯು ಹೋಟೆಲ್‌ನಲ್ಲಿ ಹೈವೋಲ್ಟೇಜ್ ಡ್ರಾಮಾಕ್ಕೆ ಕಾರಣವಾಯಿತು.

ಪತ್ನಿಯು ತನ್ನ ಪತಿಯನ್ನು ಹಿಂಬಾಲಿಸಲು ಕೆಲವು ಜನರನ್ನು ನೇಮಿಸಿದ್ದಳು. ಆಕೆ ಪತಿಗೆ ಸಂಬಂಧಿಸಿದ ಮಾಹಿತಿಗಾಗಿ ಕಾಯುತ್ತಿದ್ದಳು. ಒಂದು ದಿನ ಆಕೆಗೆ ಆಕೆಯ ಪತಿ ಹೋಟೆಲ್‌ನ ಕೋಣೆಯೊಂದರಲ್ಲಿ ಇಬ್ಬರು ಯುವತಿಯರೊಂದಿಗೆ ಇದ್ದಾನೆಂಬ ಮಾಹಿತಿ ಸಿಕ್ಕಿತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ ಆಕೆ, ಅವರನ್ನು ಕರೆದುಕೊಂಡು ಹೋಟೆಲ್‌ಗೆ ತೆರಳಿದಳು.

ಹೋಟೆಲ್ ಕೋಣೆಯ ಬಾಗಿಲು ಬಡಿದಾಗ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಪೊಲೀಸರು ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಬಾಗಿಲು ತೆರೆದಿದ್ದು, ಒಳಗೆ ಪತಿ ಮತ್ತು ಇಬ್ಬರು ಯುವತಿಯರು ಇದ್ದರು. ಅಲ್ಲದೆ, ಮೇಜಿನ ಮೇಲೆ ಮದ್ಯದ ಬಾಟಲ್, ಕಾಂಡೋಮ್ ಪ್ಯಾಕೇಟ್ ಮತ್ತು ಸಿಗರೇಟ್ ಸಹ ಇದ್ದವು. ಈ ದೃಶ್ಯವನ್ನು ನೋಡಿದ ಪತ್ನಿಯು ಆಘಾತಗೊಂಡಿದ್ದಾಳೆ.

ಪೊಲೀಸರು ಪತಿಯನ್ನು ಹಾಗೂ ಯುವತಿಯರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read