ಮದುವೆ ಕಾರ್ಡ್​ ಪ್ರಿಂಟ್​ ಆದಮೇಲೆ ಮುರಿದು ಬಿದ್ದಿದ್ದಂತೆ ಸಲ್ಮಾನ್​ ಖಾನ್​ ಮದುವೆ….!

ಸಲ್ಮಾನ್​ ಖಾನ್​ ಬಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಸಲ್ಮಾನ್​ ಖಾನ್​ ದಾಂಪತ್ಯ ಜೀವನಕ್ಕೆ ಇನ್ನೇನು ಕಾಲಿಡಬೇಕು ಅನ್ನೋವಷ್ಟರಲ್ಲಿ ಅವರ ಮದುವೆ ಮುರಿದು ಬಿದ್ದಿತ್ತು ಅನ್ನೋದು ಬಹುತೇಕರಿಗೆ ತಿಳಿಯದ ವಿಚಾರ. 1980ರಲ್ಲಿ ಬಾಲಿವುಡ್​ ನಟಿ ಸಂಗೀತಾ ಬಿಜಲಾನಿ ಜೊತೆಯಲ್ಲಿ ಬರೋಬ್ಬರಿ 8 ವರ್ಷಗಳ ಕಾಲ ಸಲ್ಮಾನ್​ ಖಾನ್ ಡೇಟಿಂಗ್​ ಮಾಡಿದ್ದರು. ಅಲ್ಲದೇ ಅವರಿಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ ವಿಧಿ ಅವರ ಹಣೆಯಲ್ಲಿ ಬೇರೆಯದನ್ನೇ ಬರೆದಿತ್ತು.

ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಸಲ್ಮಾನ್​ ಖಾನ್​ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ನಾನೂ ಮದುವೆಯಾಗಬೇಕು ಎಂದುಕೊಂಡಿದ್ದೆ. ನಾನು ಯಾರೊಂದಿಗೆ ಕ್ಲೋಸ್​ ಆಗೋಕೆ ಹೋದರೂ ಸಹ ಅದು ಕೆಲಸಕ್ಕೆ ಬರೋದಿಲ್ಲ. ಬಹುಶಃ ಯುವತಿಯರಿಗೆ ನಾನು ಒಳ್ಳೆಯ ಬಾಯ್​ಫ್ರೆಂಡ್,​ ಆದರೆ ಮದುವೆಯಾಗೋಕೆ ಯೋಗ್ಯನಲ್ಲ ಎಂದೆನಿಸುತ್ತೆ. ಸಂಗೀತಾ ಜೊತೆಯಲ್ಲಂತೂ ನಮ್ಮ ಮದುವೆ ಕಾರ್ಡ್ ಕೂಡ ಪ್ರಿಂಟ್​ ಆಗಿತ್ತು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಕರಣ್, ನೀವು ಸಂಗೀತಾರಿಗೆ ಮೋಸ ಮಾಡಿದ್ರಾ ಎಂದು ಕೇಳಿದ್ದಾರೆ. ಇದಕ್ಕೆ ಸಲ್ಮಾನ್​ ಹೌದು ಎಂದು ಉತ್ತರಿಸಿದ್ದಾರೆ. ಹೌದು ನಾನಾಗ ಮೂರ್ಖನಾಗಿದ್ದೆ . ಹೀಗಾಗಿ ಸಂಗೀತಾಳಿಗೆ ಚೀಟ್​ ಮಾಡುವಾಗ ಸಿಕ್ಕಿಬಿದ್ದೆ ಎಂದಿದ್ದಾರೆ.

ಆದರೆ ಬ್ರೇಕಪ್​, ಮದುವೆ ಮುರಿದು ಬಿದ್ದ ಬಳಿಕವೂ ಇಂದಿಗೂ ಸಂಗೀತಾ ಹಾಗೂ ಸಲ್ಮಾನ್​ ಖಾನ್​ ಉತ್ತಮ ಸ್ನೇಹ ಹೊಂದಿದ್ದಾರೆ. ಈ ವಿಚಾರವಾಗಿ ಸ್ವತಃ ಸಂಗೀತಾ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಸಂಪರ್ಕ ತಪ್ಪಿ ಹೋಗಬಹುದು. ಆದರೆ ನಿಮ್ಮ ಪ್ರೀತಿ ಪಾತ್ರರು ಹಾಗೂ ಶಾಲಾ ಸಹಪಾಠಿಗಳ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗೋದಿಲ್ಲ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಹಾಗಂತ ನೀವು ಎಲ್ಲರೊಂದಿಗೆ ಸಂಬಂಧದಲ್ಲಿ ಕಹಿಯನ್ನು ಉಳಿಸಿಕೊಳ್ಳೋದು ಕೂಡ ಸರಿಯಲ್ಲ. ಜೀವನವೇ ಒಂದು ಅನುಭವವಿದ್ದಂತೆ ಎಂದು ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read