ದಾಂಪತ್ಯ ಜೀವನ ಮುರಿದುಬಿದ್ದ ಕುರಿತು ಮೊದಲ ಬಾರಿಗೆ ಮಾತನಾಡಿದ ಕ್ರಿಕೆಟಿಗ ಶಿಖರ್ ಧವನ್

ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರು ತಮ್ಮ ವೈವಾಹಿಕ ಜೀವನ ಮುರಿದುಬಿದ್ದ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಶಿಖರ್ ಧವನ್ ಮತ್ತು ಅವರ ಪತ್ನಿ ಏಶಾ ಮುಖರ್ಜಿ ಅವರು ದೂರವಾಗಿ ಸ್ವಲ್ಪ ಸಮಯ ಕಳೆದಿದೆ.

ದಂಪತಿಗಳ ಪ್ರತ್ಯೇಕತೆಯ ಬಗ್ಗೆ ವದಂತಿಗಳು ಪ್ರಾರಂಭವಾದಾಗಿನಿಂದ ಶಿಖರ್ ಧವನ್ ಅಥವಾ ಅವರ ಪತ್ನಿ ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದಾಗ್ಯೂ ಸಂದರ್ಶನವೊಂದರಲ್ಲಿ ಧವನ್ ಅಂತಿಮವಾಗಿ ವಿಷಯದ ಬಗ್ಗೆ ಮಾತನಾಡಿದ್ದು ಅವರು ಮತ್ತು ಅವರ ಪತ್ನಿ ಹೇಗೆ ಪ್ರತ್ಯೇಕ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು ಎಂಬುದನ್ನು ವಿವರಿಸಿದರು. ಮರುಮದುವೆ ವಿಷಯದ ಕುರಿತು ಮಾತನಾಡುತ್ತಾ, ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಪ್ರಮುಖ ಸಲಹೆಯನ್ನು ನೀಡಿದರು.

ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ ಧವನ್ ಮದುವೆಯಲ್ಲಿ ವಿಫಲವಾಗಿದ್ದೇನೆ ಎಂದು ಒಪ್ಪಿಕೊಂಡರು. ಆದರೆ ಅವರು ತೆಗೆದುಕೊಂಡ ನಿರ್ಧಾರಗಳು ತಮ್ಮದೇ ಆದ ಕಾರಣ ಇತರರತ್ತ ಬೆರಳು ತೋರಿಸಲು ಬಯಸುವುದಿಲ್ಲ ಎಂದಿದ್ದಾರೆ.

ನಾನು ವಿಫಲನಾಗಿದ್ದೇನೆ ಏಕೆಂದರೆ ಅಂತಿಮ ನಿರ್ಧಾರವು ವ್ಯಕ್ತಿಯದ್ದಾಗಿದೆ, ನಾನು ಇತರರತ್ತ ಬೆರಳು ತೋರಿಸುವುದಿಲ್ಲ, ನನಗೆ ಆ ಕ್ಷೇತ್ರದ ಬಗ್ಗೆ ತಿಳಿದಿಲ್ಲದ ಕಾರಣ ನಾನು ವಿಫಲನಾಗಿದ್ದೇನೆ. ತಮ್ಮ ವಿಚ್ಛೇದನ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ ಎಂದು ಹೇಳಿದ ಧವನ್ ಮರುಮದುವೆ ವಿಷಯವನ್ನ ತಳ್ಳಿಹಾಕದಿದ್ರೂ ಸದ್ಯಕ್ಕೆ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದರು.

ಸದ್ಯ ನನ್ನ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ನಾಳೆ ನಾನು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಆ ಕ್ಷೇತ್ರದಲ್ಲಿ ಹೆಚ್ಚು ಬುದ್ಧಿವಂತನಾಗಿರುತ್ತೇನೆ. ನನಗೆ ಯಾವ ರೀತಿಯ ಹುಡುಗಿ ಬೇಕು ಎಂದು ನನಗೆ ತಿಳಿಯುತ್ತದೆ ಎಂದರು.

ಯುವಜನರು ಸಂಬಂಧಗಳನ್ನು ಅನುಭವಿಸಬೇಕು. ಅವರು ಭಾವನಾತ್ಮಕ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು ಮತ್ತು ಮದುವೆಯಾಗಬೇಕು. ನಿಮ್ಮವರೊಂದಿಗೆ ನಿಮ್ಮ ಸಂಸ್ಕೃತಿಗಳು ಹೊಂದಿಕೆಯಾಗುತ್ತವೆಯೇ ಮತ್ತು ನೀವು ಪ್ರತಿಯೊಂದನ್ನು ಆನಂದಿಸುತ್ತೀರಾ ಎಂದು ನೋಡಿ ಎಂದು ಸಲಹೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read