ಹೇಗಿರಲಿದೆ ‘ಬಿಗ್ ಬಾಸ್’ ಮನೆ ? : ಕುತೂಹಲ ಮೂಡಿಸಿದ ಕಿಚ್ಚ ಸುದೀಪ್ ಟ್ವೀಟ್.!

ಬೆಂಗಳೂರು : ‘ಬಿಗ್ ಬಾಸ್’ ಕನ್ನಡ ಸೀಜನ್ -12ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಜನ್ -12ರ ದಿನಾಂಕ ಘೋಷಿಸಿದ್ದಾರೆ.ಸೆ.28 ರಿಂದ ಬಿಗ್ ಬಾಸ್ ಸೀಸನ್-12 ಆರಂಭವಾಗಲಿದೆ. ಇದೀಗ ಕಿಚ್ಚ ಸುದೀಪ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಪ್ರೋಮೋ ವಿಷಯಕ್ಕೆ ಬಂದರೆ, ತಂಡವು ನಿಜಕ್ಕೂ ಅದ್ಭುತವಾದ ಸೃಜನಶೀಲತೆಯನ್ನು ಪ್ರದರ್ಶಿಸಿದೆ. ಬಿಡುಗಡೆಯಾಗಲಿರುವ ಎರಡನೇ ಪ್ರೋಮೋ ನೀವು ಏನನ್ನು ಎದುರು ನೋಡಬಹುದೆಂಬುದರ ಬಗ್ಗೆ ಒಂದು ಇಣುಕು ನೋಟವನ್ನು ನೀಡುತ್ತವೆ. ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ ಇರಲಿದೆ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ ಇರಲಿದೆ ಎಂದು ಸುದೀಪ್ ಹಿಂಟ್ ನೀಡಿದ್ದಾರೆ.

ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಇದೀಗ ದಿನಾಂಕವನ್ನೂ ಅವರೇ ಅನೌನ್ಸ್ ಮಾಡಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಸ್ಪರ್ಧಿಗಳ ಆಯ್ಕೆಯಾಗಿದ್ದು, ಕೆಲವರ ಆಯ್ಕೆ ಮಾತ್ರ ಬಾಕಿ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read