WATCH VIDEIO : ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ ? : ಜೆಡಿಎಸ್ ವಾಗ್ಧಾಳಿ

ಬೆಂಗಳೂರು : ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ..? ಎಂದು ಟ್ವಿಟರ್ ನಲ್ಲಿ ಜೆಡಿಎಸ್ ವಾಗ್ಧಾಳಿ ನಡೆಸಿದೆ.

ಇದು ದಲಿತ ವಿರೋಧಿ @INCKarnatakaಸರ್ಕಾರದ ಢೋಂಗಿ ಸಮೀಕ್ಷೆ. ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ @siddaramaiah, ಡಿಸಿಎಂ @DKShivakumar ಅವರೇ, ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ ? ಲಂಚಗುಳಿತನ, ಭ್ರಷ್ಟಾಚಾರ, ಅಧಿಕಾರ ದಾಹ, ಕುರ್ಚಿ ಕಿತ್ತಾಟದಲ್ಲಿ ಮಗ್ನರಾಗಿರುವ ಸಿಎಂ, ಡಿಸಿಎಂ ನಿಮ್ಮ ರಾಜಕೀಯ ಮೇಲಾಟಗಳಿಗಾಗಿ ಕನ್ನಡಿಗರ ತರಿಗೆ ಹಣವನ್ನು ಪೋಲು ಮಾಡಬೇಡಿ ಎಂದು ಟ್ವಿಟರ್ ನಲ್ಲಿ ಜೆಡಿಎಸ್ ವಾಗ್ಧಾಳಿ ನಡೆಸಿದೆ.

ಇಂತಹ ನಕಲಿ, ಬೂಟಾಟಿಕೆಯ, ತೋರಿಕೆಯ ಜಾತಿಗಳ ಸಮೀಕ್ಷೆಯನ್ನು ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದೀರಿ ? ಇದರಿಂದ ಯಾರಿಗೆ ಲಾಭ ? @siddaramaiah. ರಾಜಕೀಯ ಲಾಭಕ್ಕಾಗಿ ಕಾಟಾಚಾರದ ಜಾತಿಗಳ ಸಮೀಕ್ಷೆ ಮಾಡಿಸುತ್ತಿರುವ @INCKarnatakaಸರ್ಕಾರದ ನಿಜಬಣ್ಣ ಮತ್ತೊಮ್ಮೆ ಬಯಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಪಾರದರ್ಶಕವಾಗಿ ನಡೆಸದೇ ಸರ್ಕಾರ ಕಳ್ಳಾಟ‌ವಾಡುತ್ತಿದೆ. ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿಗಳು, ಮನೆ ಮನೆಗೆ ತೆರಳದೆ, ಮನೆಯವರನ್ನು ಸಂಪರ್ಕಿಸದೆ, ಮನೆ ಬಾಗಿಲಿಗೆ “ಸಮೀಕ್ಷೆ ಪೂರ್ಣ” ಚೀಟಿ ಅಂಟಿಸಿ ಹೋಗುತ್ತಿದ್ದಾರೆ. ಮನೆಯಲ್ಲಿ ವಾಸಿಸುತ್ತಿರುವವರ ಜನರ ಬಳಿ ಅವರ ಜಾತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕಲೆಹಾಕದೆ, ಕಾಟಾಚಾರದ ಸಮೀಕ್ಷೆ ಮಾಡುತ್ತಿರುವುದು ಬಟಬಯಲಾಗಿದೆ ಎಂದು ಜೆಡಿಎಸ್ ವಾಗ್ಧಾಳಿ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read