ಮಕ್ಕಳಿಗೆ ಅಜೀರ್ಣದಿಂದಾದ ಹೊಟ್ಟೆನೋವಿಗೆ ಪರಿಹಾರವೇನು…..?

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ ತಂದೊಡ್ಡುತ್ತದೆ.

ಹೊಟ್ಟೆ ಹಾಳಾಗುವುದರಿಂದ ಮಕ್ಕಳಿಗೆ ಕೆಲವೊಮ್ಮೆ ವಾಂತಿ, ಅತಿಸಾರ ಮತ್ತು ಜ್ವರದಂಥ ಲಕ್ಷಣಗಳು ಕಂಡು ಬಂದಾವು. ಮಗು ವಿನಾಕಾರಣ ವಿಪರೀತ ಅಳುತ್ತಿದ್ದರೆ ಆಗ ಮಗುವಿಗೆ ಸಾಕಷ್ಟು ದ್ರವಗಳನ್ನು ಸೇವಿಸಲು ಕೊಡಿ. ನಿರ್ಜಲೀಕರಣದಿಂದ ದೇಹ ಸೊರಗದಿರಲಿ.

ಮಗುವಿಗೆ ಹಸಿವಾಗಿದ್ದರೆ ಅದಕ್ಕೆ ಲಘು ಆಹಾರಗಳನ್ನು ನೀಡಿ. ಒತ್ತಾಯಿಸಿ ಯಾವುದೇ ಆಹಾರ ಕೊಡದಿರಿ. ಶೌಚಾಲಯಕ್ಕೆ ಹೋಗುವಂತೆ ಪ್ರೋತ್ಸಾಹಿಸಿ. ಇದರಿಂದಲೂ ಹೊಟ್ಟೆ ನೋವು ಕಡಿಮೆಯಾಗುವುದುಂಟು.

ಮಗುವಿನ ಹೊಟ್ಟೆಯನ್ನು ನಯವಾಗಿ ಮಸಾಜ್ ಮಾಡಿ. ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಿ. ಇಷ್ಟದ ಕಾರ್ಟೂನ್ ಪ್ಲೇ ಮಾಡಿ.

ತೀವ್ರವಾದ ನೋವು, ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಮಲಪರೀಕ್ಷೆ, ಎಕ್ಸ್ ರೇ ಅಥವಾ ಆಲ್ಟ್ರಾಸೌಂಡ್ ಮೂಲಕ ಹೊಟ್ಟೆ ನೋವಿನ ಕಾರಣ ತಿಳಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read