‘ದೃ‌ಷ್ಟಿʼ ಬೀಳಲು ಏನು ಕಾರಣ….? ಮತ್ತು ಪರಿಹಾರ ಹೇಗೆ….?

ದೃಷ್ಟಿ ಬಿದ್ದಿದೆ ಎಂಬುದನ್ನು ನಾವು ಚಿಕ್ಕವರಿರುವಾಗಿನಿಂದಲೂ ಕೇಳಿದ್ದೇವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ ಕೆಲವರು ನಂಬಿದ್ದಾರೆ. ಆದ್ರೆ ಅದು ತಪ್ಪು. ಈ ದೃಷ್ಟಿ ಬೀಳಲು ವೈಜ್ಞಾನಿಕ ಕಾರಣಗಳು ಕೂಡ ಇವೆ.

ವಿಜ್ಞಾನದ ಪ್ರಕಾರ, ದೇಹದಲ್ಲಿ ವಿದ್ಯುತ್ ತರಂಗಗಳಿರುತ್ತವೆ. ಈ ವಿದ್ಯುತ್ ತರಂಗಗಳಿಂದಾಗಿ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ದೃಷ್ಟಿಗೆ ಹಾಗೂ ವಿದ್ಯುತ್ ತರಂಗಗಳಿಗೆ ನೇರ ಸಂಬಂಧ ಕೂಡ ಇದೆ.

ದೊಡ್ಡವರಿಗಿಂತ ಮಕ್ಕಳಿಗೆ ದೃಷ್ಟಿ ಬೀಳುವುದು ಜಾಸ್ತಿ. ಮಕ್ಕಳ ದೇಹ ಕೋಮಲವಾಗಿರುತ್ತದೆ. ದೊಡ್ಡವರ ದೇಹಕ್ಕಿಂತ ಚಿಕ್ಕವರ ದೇಹದಲ್ಲಿ ವಿದ್ಯುತ್ತಿನ ಸಾಮರ್ಥ್ಯ ಕಡಿಮೆ ಇರುತ್ತದೆ.

ದೃಷ್ಟಿ ಬೀಳದಂತೆ ನೋಡಿಕೊಳ್ಳಲು ಮಕ್ಕಳಿಗೆ ಕಪ್ಪು ದಾರವನ್ನು ಕೊರಳಿಗೆ ಹಾಗೂ ಕಾಲಿಗೆ ಕಟ್ಟುತ್ತಾರೆ. ಹಾಗೆಯೇ ಕಾಡಿಗೆ ಹಚ್ಚುತ್ತಾರೆ. ಇದಕ್ಕೆ ಕೂಡ ವೈಜ್ಞಾನಿಕ ಕಾರಣಗಳಿವೆ. ಕಪ್ಪು ಬಣ್ಣಕ್ಕೆ ಶಾಖ ಹೀರಿಕೊಳ್ಳುವ ಶಕ್ತಿ ಇದೆ. ಕಾಡಿಗೆ ಹಚ್ಚಿದ್ರೆ ಅಥವಾ ಕಪ್ಪು ಬಣ್ಣದ ದಾರವನ್ನು ಕಟ್ಟಿದ್ರೆ ಅದು ಯಾವುದೇ ಪ್ರಕಾರದ ಉಷ್ಣ ದೇಹ ಪ್ರವೇಶ ಮಾಡಲು ಬಿಡುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read