ಶಿವಮೊಗ್ಗ : ಜುಲೈ 1 ರ ಮಂಗಳವಾರ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ‘ಹಲೋ ಆಕಾಶವಾಣಿ” ನೇರ ಫೋನ್ ಇನ್ ಕಾರ್ಯಕ್ರಮವು ಆಕಾಶವಾಣಿ ಭದ್ರಾವತಿಯಿಂದ ಪ್ರಸಾರವಾಗಲಿದೆ.
ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಚಟುವಟಿಕೆ, ಆಹಾರ ಉದ್ಯಮದ ನೋಂದಣಿ, ಪರವಾನಗಿ ಪಡೆಯುವ ಬಗೆ, ಆಹಾರ ಉದ್ದಿಮೆದಾರರ ಜವಾಬ್ದಾರಿ, ಆಹಾರ ಮಾದರಿ ಪರೀಕ್ಷೆ, ಕಳಪೆ ಗುಣಮಟ್ಟದ ಆಹಾರ ವಿತರಿಸಿದರೆ ಯಾವ ಶಿಕ್ಷೆ ಇದೆ ಹೀಗೆ ಮುಂತಾದ ವಿಷಯಗಳ ಬಗ್ಗೆ ಈ ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡಲಾಗುವುದು.
ಶಿವಮೊಗ್ಗ ಜಿಲ್ಲಾ ಆಹಾರ ಸುರಕ್ಷಿತ ಅಂಕಿತ ಅಧಿಕಾರಿಗಳಾದ ಡಾ. ಹರೀಶ್ ಇವರಿಗೆ ಮಂಗಳವಾರ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ದೂರವಾಣಿ ಸಂಖ್ಯೆ: 08282-270282, 270283 (ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600) ಕರೆ ಮಾಡಬಹುದು. ಈ ಕಾರ್ಯಕ್ರಮದ ಪ್ರಾಯೋಜಕರು ಕರ್ನಾಟಕ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಬೆಂಗಳೂರು.
ಜುಲೈ 1 ಮಂಗಳವಾರ ಸಂಜೆ 7 ಗಂಟೆಗೆ ಕಿಸಾನ್‌ವಾಣಿ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿ, ಇಲಾಖೆಯಿಂದ ಏರ್ಪಡಿಸಿದ ವಿವಿಧ ತರಬೇತಿ ಕುರಿತು ಭದ್ರಾವತಿ ಹಳ್ಳಿಕೆರೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಮಮತಾ ಬಿ ಆರ್ ಅವರು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದಾರೆ. ದೂರವಾಣಿ ಸಂಖ್ಯೆ: 08282-270282, 270283. (ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600) ಕರೆ ಮಾಡಬಹುದು ಎಂದು ಭದ್ರಾವತಿ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್. ಭಟ್ ತಿಳಿಸಿದ್ದಾರೆ.