ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಮಾವಿನಹಣ್ಣು ತಿಂದರೆ ಏನಾಗುತ್ತದೆ….? ಇಲ್ಲಿದೆ ಸಂಪೂರ್ಣ ವಿವರ

ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ದೆಹಲಿಯ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್, ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಕೇಜ್ರಿವಾಲ್‌, ಜೈಲಿನಲ್ಲಿ ಮಾವಿನಹಣ್ಣು ತಿನ್ನುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಕೇಜ್ರಿವಾಲ್ ಪದೇ ಪದೇ ಮನವಿ ಮಾಡಿದರೂ ಅವರಿಗೆ ಇನ್ಸುಲಿನ್ ನೀಡುತ್ತಿಲ್ಲ, ಅವರ ಶುಗರ್ ಪ್ರಮಾಣ ಹೆಚ್ಚುತ್ತಿದೆ ಅನ್ನೋದು ಆಮ್‌ ಆದ್ಮಿ ಪಕ್ಷದ ಆರೋಪ.

ಈ ವಿವಾದ ಮಧುಮೇಹ ರೋಗಿಗಳು ಮಾವಿನ ಹಣ್ಣನ್ನು ತಿನ್ನಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಾವಿನ ಹಣ್ಣು ಸೇವನೆಯ ಸಂದರ್ಭದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನೆಲ್ಲ ನೋಡೋಣ.

ಮಾವು ಮತ್ತು ಮಧುಮೇಹ: ತಜ್ಞರು ಹೇಳುವುದೇನು?

ಮಾವಿನ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಕ್ಕರೆ (ಫ್ರಕ್ಟೋಸ್) ಇರುತ್ತದೆ. ಮಾವು ಸಿಹಿಯಾಗಿರುತ್ತದೆ ಮತ್ತು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಮಾವಿನಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ರಕ್ತದಲ್ಲಿನ ಸಕ್ಕರೆಯ ಮಟ್ಟವು ಯಾವಾಗಲೂ ಹೆಚ್ಚಿದ್ದರೆ ಅಂಥವರು ಮಾವಿನಹಣ್ಣು ತಿನ್ನಬಾರದು. ಮಾವು ಸೇವನೆಯ ಪ್ರಮಾಣವು ರೋಗಿಯ ಮಧುಮೇಹ ನಿಯಂತ್ರಣ, ಔಷಧಿಗಳು ಮತ್ತು ಚಟುವಟಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ.

ಮಧುಮೇಹ ರೋಗಿಯು ಒಂದು ಚಿಕ್ಕ ಹಣ್ಣು ಅಂದರೆ ಸುಮಾರು 100 ಗ್ರಾಂಗಿಂತ ಹೆಚ್ಚು ಮಾವಿನ ಹಣ್ಣನ್ನು ತಿನ್ನಬಾರದು. ಅಲ್ಲದೆ ಮಾವಿನ ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನುವುದು ಮುಖ್ಯ. ಇದನ್ನು ಬೆಳಗಿನ ಉಪಾಹಾರದೊಂದಿಗೆ ಅಥವಾ ಸ್ವಲ್ಪ ಹಣ್ಣುಗಳೊಂದಿಗೆ ಸೇವಿಸುವುದು ಉತ್ತಮ.

ಮಧುಮೇಹ ರೋಗಿಗಳಿಗೆ ಮಾವು ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತ್ವರಿತವಾಗಿ ಹೆಚ್ಚಾಗುತ್ತದೆ. ಇದು ಆಯಾಸ, ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮತ್ತು ದೃಷ್ಟಿ ಮಂದವಾಗುವುದು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read