ಏಕಾಏಕಿ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಾಗ್ತಿದೆಯಾ….? ಇದ್ರಿಂದ ದೂರವಿರಿ

ಮುಖದ ಮೇಲೆ ಕಾಣಿಸಿಕೊಳ್ಳುವ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್, ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ. ಚರ್ಮದ ಮೇಲೆ ಮೆಲನಿನ್ ಅಧಿಕ ಉತ್ಪಾದನೆಯಿಂದ ಹೈಪರ್ ಪಿಗ್ಮೆಂಟೇಶನ್ ಉಂಟಾಗುತ್ತದೆ. ವಿವಿಧ ಕಾರಣಕ್ಕೆ ಇದು ಉತ್ಪಾದನೆಯಾಗುತ್ತದೆ.

ಗರ್ಭಾವಸ್ಥೆಯ ನಂತರ ಹಾರ್ಮೋನುಗಳ ಬದಲಾವಣೆಯಿಂದಾಗಿ ಮುಖದಲ್ಲಿ ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ ಆರಂಭವಾಗುತ್ತದೆ. ಸೂರ್ಯನ ಬೆಳಕಿನಿಂದಲೂ ಕೆಲವರಿಗೆ ಇದು ಕಾಡುತ್ತದೆ. ಕಿಮೋಥೆರಪಿ ನಂತ್ರವೂ ಅನೇಕರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದ್ರಿಂದ ರಕ್ಷಣೆ ಪಡೆಯಲು ಕೆಲವೊಂದು ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಫೋನ್‌, ಟಿವಿ ಪರದೆ, ಫ್ಲೋರೊಸೆಂಟ್ ಬಲ್ಬ್ ಗಳಿಂದ ದೂರವಿರಬೇಕು. ಇದು ಹೈಪರ್‌ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚಿಸುತ್ತದೆ.

ಒಣ ಚರ್ಮ ಹೊಂದಿರುವವರು, ವಾರಕ್ಕೆ ಎರಡು ಬಾರಿ ಮತ್ತು ಎಣ್ಣೆಯುಕ್ತ ಚರ್ಮ ಹೊಂದಿರುವವರು ವಾರಕ್ಕೊಮ್ಮೆ ಒಮ್ಮೆ ಮಾತ್ರ ಫೇಶಿಯಲ್ ಮಾಡಿಸಿಕೊಳ್ಳಬೇಕು. ಪದೇ ಪದೇ ಫೇಶಿಯಲ್ ಮಾಡುವುದು ಒಳ್ಳೆಯದಲ್ಲ.

ಮೊಡವೆ, ಕೀವು ಇತ್ಯಾದಿಗಳು ಕೂಡ ಹೈಪರ್ ಪಿಗ್ಮೆಂಟೇಶನ್ ಗೆ ಕಾರಣವಾಗಿರಬಹುದು. ಇದ್ರಿಂದ ಮುಖ, ಕೆನ್ನೆ, ಹಣೆಯ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ.

ಸನ್ ಸ್ಕ್ರೀನ್ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಪ್ರತಿದಿನ ಸನ್ಸ್ಕ್ರೀನ್ ಅಥವಾ ಸನ್ಬ್ಲಾಕ್ ಲೋಷನ್ ಬಳಸಿ. ಬಿಸಿಲಿಗೆ ಹೋಗುವ ಅರ್ಧ ಗಂಟೆ ಮೊದಲು ಹಚ್ಚಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read