ಬೆಂಗಳೂರು : ರಾಜ್ಯದ ಕಂದಾಯ ನಿರೀಕ್ಷಕರ (RI) ಅಧಿಕಾರ ಮತ್ತು ಕರ್ತವ್ಯಗಳೇನು..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕಂದಾಯ ನಿರೀಕ್ಷಕರ ಅಧಿಕಾರ ಮತ್ತು ಕರ್ತವ್ಯಗಳು
ಕಂದಾಯ ನಿರೀಕ್ಷಕರು ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಅವರು ಈ ಕೆಳಕಂಡ ಕಾಯ್ದೆ/ನಿಯಮಗಳ ಅಡಿಯಲ್ಲಿ ಅಧಿಕಾರ/ಕರ್ತವ್ಯ ನಿರ್ವಹಿಸುತ್ತಾರೆ.
1. ಕಂದಾಯ ನಿರೀಕ್ಷಕರ ಅಧಿಕಾರ ಮತ್ತು ಕರ್ತವ್ಯಗಳು
ಕಂದಾಯ ನಿರೀಕ್ಷಕರು ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಅವರು ಈ ಕೆಳಕಂಡ ಕಾಯ್ದೆ/ನಿಯಮಗಳ ಅಡಿಯಲ್ಲಿ ಅಧಿಕಾರ/ಕರ್ತವ್ಯ ನಿರ್ವಹಿಸುತ್ತಾರೆ.
ಜಿಲ್ಲಾಧಿಕಾರಿಯವರು ಪ್ರತಿ ಕಂದಾಯ ನಿರೀಕ್ಷಕರಿಗೆ ಪ್ರತಿವರ್ಷ 3-4 ಗ್ರಾಮಗಳಲ್ಲಿ ಮೇರೆ ಗುರ್ತು ದುರಸ್ತಿಗೆ ಸಾರ್ವತ್ರಿಕ ಅವಕಾಶ ಇದೆ.
ಕಲಂ 122-ಅರಡಿಯಲ್ಲಿ ಹಿಡುವಳಿ ದಾರರಿಗೆ ಭೂಕಂದಾಯ ನಿಳದಿಪಡಿಸಿದ ಬಗ್ಗೆ ನಮೂನೆ 31-ಅ ರಡಿ ನೋಟೀಸು ನೀಡುವುದು.
ಸರ್ಕಾರಿ ಬಾಕಿ ವಸೂಲಿ ಬಗ್ಗೆ ನೋಟೀಸು ನೀಡಿದ ನಂತರ ವ್ಯಕ್ತಿಯು ಯು ಬಾಕಿ ತುಂಬದೇ ಇದ್ದಲ್ಲಿ ಮೇಲಾಧಿಕಾರಿಗಳ ನಿರ್ದೇಶನ ಮೇರೆಗೆ ಸ್ವತ್ತಿನ ಮಾರಾಟದ ಬಗ್ಗೆ ಕ್ರಮ ಜರುಗಿಸುವುದು ಮತ್ತು ನಿಯಮ 113 ರಲ್ಲಿ ವಿವರಿಸಿದಂತೆ ಮಾರಾಟ ಪ್ರಕ್ರಿಯೆಗೆ ಕ್ರಮ ಜರುಸುವುದು.
ವಸೂಲಿ ಕುರಿತಂತೆ ಖಾತೆ ಹಾಗೂ ಕಿರ್ದಿಗಳನ್ನು ಪರಿಶೀಲಿಸುವುದು. ಪ್ರತಿಶತ: 20 ರಷ್ಟು ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸುವುದು.




