ವಿಶ್ವದ ದುಬಾರಿ ಮಾವು ಈಗ ಬಂಗಾಳದಲ್ಲಿ….! ತಲೆ ತಿರುಗಿಸುವಂತಿದೆ ಇದರ ಬೆಲೆ

ಮಾಲ್ಡಾ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣನ್ನು ಈಗ ಪಶ್ಚಿಮ ಬಂಗಾಳದಲ್ಲಿ ಬೆಳೆಯಲಾಗುತ್ತಿದೆ. ಜಪಾನೀಸ್ ಮಿಯಾಝಾಕಿ ಎಂದು ಕರೆಯಲ್ಪಡುವ ಈ ಮಾವಿನ ತಳಿಯು ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ಲಕ್ಷ ರೂಪಾಯಿ ಬೆಲೆ ಇದೆ….!

ಇದು ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಹಳದಿ ಪೆಲಿಕಾನ್ ಮಾವಿನಂತಿರುವ ಇರ್ವಿನ್ ಮಾವಿನ ಒಂದು ವಿಧವಾಗಿದೆ. ಮೂಲತಃ ಜಪಾನ್‌ನ ಮಿಯಾಜಾಕಿ ನಗರದಲ್ಲಿ ಬೆಳೆಸಲಾಗುತ್ತಿದ್ದ ಈ ಹಣ್ಣನ್ನು ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ವಾಣಿಜ್ಯಿಕವಾಗಿ ಬೆಳೆಸಲು ಕೃಷಿ ಇಲಾಖೆ ನಿರ್ಧರಿಸಿ ಯಶಸ್ವಿಯಾಗಿದೆ.

ಈ ಪ್ರದೇಶವು ಪ್ರಪಂಚದಾದ್ಯಂತ ರಫ್ತಾಗುವ ಮಾಲ್ಡಾ ಮಾವಿನ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಇದು ಪಶ್ಚಿಮ ಬಂಗಾಳದ ಏಳು ಶತಮಾನದಷ್ಟು ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ.

ಜಪಾನ್‌ನಿಂದ ಮಿಯಾಜಾಕಿ ಮಾವಿನ ಸಸಿಗಳನ್ನು ತಂದ ನಂತರ ಬಂಗಾಳದ ಇಂಗ್ಲಿಷ್ ಬಜಾರ್ ಬ್ಲಾಕ್‌ನಲ್ಲಿ ಮಾವಿನ ತೋಟವನ್ನು ಬೆಳೆಸಲು ಸರ್ಕಾರ ಯೋಜಿಸಿದೆ.

ಬೆಲೆಬಾಳುವ ಮಾವಿನ ಸಸಿಗಳು ಒಂದು ವಾರದೊಳಗೆ ಮಾಲ್ಡಾವನ್ನು ತಲುಪುವ ನಿರೀಕ್ಷೆಯಿದೆ, ಮಾಗಿದ ನಂತರ ನೇರಳೆ ಬಣ್ಣದಿಂದ ಉರಿಯುವ ಕೆಂಪು ಬಣ್ಣಕ್ಕೆ ಈ ಹಣ್ಣು ತಿರುಗುತ್ತದೆ.

ಒಂದು ಮಿಯಾಜಾಕಿ ಮಾವು ಸುಮಾರು 350 ಗ್ರಾಂ ತೂಗುತ್ತದೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.70 ಲಕ್ಷ ರೂ.ಗೆ ಮಾರಾಟವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read