ಹಾಡಹಗಲೇ ಆಭರಣ ಮಳಿಗೆ ಲೂಟಿಗೈದು ಫೈರಿಂಗ್ ಮಾಡಿದ ದರೋಡೆಕೋರರು: ಶಾಕಿಂಗ್ ವಿಡಿಯೋ ವೈರಲ್

ಕೋಲ್ಕತ್ತಾ: ಶಸ್ತ್ರಸಜ್ಜಿತ ದರೋಡೆಕೋರರು ಆಭರಣ ಅಂಗಡಿಯನ್ನು ಲೂಟಿ ಮಾಡಿದ ನಂತರ ಸಿನಿಮೀಯ ಸ್ಟೈಲ್ ನಲ್ಲಿ ಫೈರಿಂಗ್ ಮಾಡಿದ್ದಾರೆ. ಮಂಗಳವಾರ (ಆಗಸ್ಟ್ 29) ಪಶ್ಚಿಮ ಬಂಗಾಳದ ನಾಡಿಯಾ ಮತ್ತು ಪುರುಲಿಯಾ ಜಿಲ್ಲೆಗಳಲ್ಲಿ ಈ ಆಘಾತಕಾರಿ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಂಗಳವಾರ ಸಂಜೆ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ ದುಷ್ಕರ್ಮಿಗಳು ಮತ್ತು ಪೊಲೀಸರ ನಡುವಿನ ಗುಂಡಿನ ಚಕಮಕಿ ನಂತರ ನಾಲ್ವರು ದರೋಡೆಕೋರರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಸಜ್ಜಿತ ದುಷ್ಕರ್ಮಿಗಳು ಆಭರಣ ಮಳಿಗೆಯನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಬೀದಿ ಬೀದಿಗಳಲ್ಲಿ ದರೋಡೆಕೋರರು ಕೆಲ ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ್‌ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಲೂಟಿ ಮಾಡಿದ ಆಭರಣದ ಹೆಚ್ಚಿನ ಭಾಗವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಇತರರು ತಪ್ಪಿಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ಇನ್ನು ಪುರುಲಿಯಾ ಜಿಲ್ಲೆಯ ನಮೋಪಾರಾದಲ್ಲಿ ಮತ್ತೊಂದು ರಾಬರಿ ಘಟನೆ ನಡೆದಿದೆ. ಎಂಟು ಮಂದಿ ಶಸ್ತ್ರಸಜ್ಜಿತ ದರೋಡೆಕೋರರು ಆಭರಣ ಅಂಗಡಿಯೊಂದಕ್ಕೆ ನುಗ್ಗಿ 7 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ವಜ್ರಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

https://twitter.com/UtkarshSingh_/status/1696544170125705380?ref_src=twsrc%5Etfw%7Ctwcamp%5Etweetembed%7Ctwterm%5E1696544170125705380%7Ctwgr%5E0cac22b1bacd80ac246904712876455a6d3d3f02%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwest-bengal-crime-dacoits-loot-2-jewellery-shops-in-nadia-purulia-fire-shots-on-streets-in-filmy-style-watch

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read