ಮದುವೆ ಶಾಸ್ತ್ರ ನಡೆಯುವಾಗಲೇ ಮತ್ತೊಬ್ಬನ ಜೊತೆ ವಧು ಪರಾರಿ….!

ಮದುವೆ ಸಮಾರಂಭದಲ್ಲಿ ಶಾಸ್ತ್ರಗಳು ನಡೆಯುತ್ತಿದ್ದ ವೇಳೆ ಸಂಪ್ರದಾಯದಂತೆ ವಧು – ವರ ಮಾಲೆ ಬದಲಾಯಿಸಿಕೊಂಡಿದ್ದು, ಇಷ್ಟವಿಲ್ಲದ ಮದುವೆಯಾಗಿದ್ದ ಕಾರಣ ವಧು, ವರ ಮದ್ಯ ಸೇವಿಸಿದ್ದಾನೆ ಎಂದು ಆರೋಪಿಸಿ ಮದುವೆ ಮುರಿದುಕೊಂಡಿದ್ದಲ್ಲದೇ ಸಮಾರಂಭಕ್ಕೆ ಬಂದಿದ್ದ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಹರಿಯಾಣದ ನರ್ನಾಲ್ ನಲ್ಲಿ ಈ ಘಟನೆ ನವೆಂಬರ್ 27 ರಂದು ನಡೆದಿದ್ದು, ವಧು ತನ್ನ ಗೆಳೆಯನೊಂದಿಗೆ ಸ್ಥಳದಿಂದ ಪರಾರಿಯಾದ ನಂತರ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ನರ್ನಾಲ್‌ನ ನಂಗಲ್ ಚೌಧರಿ ಪ್ರದೇಶದಲ್ಲಿ ವಿವಾಹವನ್ನು ಆಯೋಜಿಸಲಾಗಿತ್ತು.

ಮಾಲೆ ವಿನಿಮಯದ ನಂತರ, ವರ ಮದ್ಯಪಾನ ಮಾಡಿದ್ದಾನೆ ಎಂದು ಆರೋಪಿಸಿದ ವಧು ಉಳಿದ ವಿಧಿವಿಧಾನಗಳನ್ನು ಮುಂದುವರಿಸಲು ನಿರಾಕರಿಸಿದ್ದು, ಈ ಸಂದರ್ಭದಲ್ಲಿ ಗೊಂದಲ ಏರ್ಪಟ್ಟಿತ್ತು. ಇದರ ಮಧ್ಯೆಯೇ ತನ್ನ ಗೆಳೆಯನ ಜೊತೆ ಅಲ್ಲಿಂದ ಪರಾರಿಯಾಗಿದ್ದಾಳೆ.

ವಧು ಮತ್ತು ವರರಿಬ್ಬರೂ ನಂಗಲ್ ಚೌಧರಿ ಪ್ರದೇಶದವರಾಗಿದ್ದು, ಈಗ ಪರಾರಿಯಾಗಿರುವ ವಧು ಪ್ರಸ್ತುತ ತನ್ನ ಪ್ರಿಯಕರನ ಜೊತೆ ದೆಹಲಿಯಲ್ಲಿದ್ದಾಳೆ ಎನ್ನಲಾಗಿದೆ. ತೀವ್ರ ಹುಡುಕಾಟ ನಡೆಸಿದರೂ ವಧು ಪತ್ತೆಯಾಗದ ಕಾರಣ ವರನ ಕಡೆಯವರು ವಾಪಾಸ್‌ ತೆರಳಿದ್ದಾರೆ.

ಮದುವೆಯಲ್ಲಿ ವಧುವಿನ ಗೆಳೆಯ ಕೂಡ ಹಾಜರಿದ್ದು ಆಕೆಯ ಕೃತ್ಯಕ್ಕೆ ಪ್ರಚೋದನೆ ನೀಡಿದ್ದ ಎಂಬ ಆರೋಪ ಕೇಳಿಬಂದಿದೆ. ಮಾಲೆ ವಿನಿಮಯದ ನಂತರವೂ ತನ್ನ ಪ್ರಿಯಕರನ ಪ್ರೇರಣೆಯಿಂದ ಹುಡುಗಿ ಮದುವೆ ಮುರಿದುಕೊಂಡಿದ್ದಾಳೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ.

ವರದಿಯ ಪ್ರಕಾರ ವರನು ಉದ್ಯಮಿಯಾಗಿದ್ದು, ವಧುವಿನ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಜಗಳದ ವೇಳೆ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಆದರೆ, ಪೊಲೀಸರಿಗೆ ಯಾವುದೇ ಅಧಿಕೃತ ದೂರು ನೀಡಲಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read