ನವದೆಹಲಿ: ಕೇಂದ್ರ ಸರ್ಕಾರ ಜನಗಣತಿ ನಡೆಸಲು ಮುಂದಾಗಿದ್ದು, ಜನರಿಂದಲೇ ದತ್ತಾಂಶ ದಾಖಲಿಸಲು ಪೋರ್ಟಲ್ ಸಿದ್ದಪಡಿಸಲಾಗುತ್ತಿದೆ.
ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ಡಿಜಿಟಲ್ ಗಣತಿ ಪ್ರಕ್ರಿಯೆ ನಡೆಸಲಾಗುವುದು. ಇಂಗ್ಲಿಷ್, ಹಿಂದಿ, ಪ್ರಾದೇಶಿಕ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ರಚಿಸಲಾಗುವುದು.
ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಗೆ ನಾಗರೀಕರು ಸ್ವಯಂ ದತ್ತಾಂಶ ದಾಖಲಿಸುವ ಸೌಕರ್ಯವನ್ನು ಕಲ್ಪಿಸಲು ಪೋರ್ಟಲ್ ಸಿದ್ದಪಡಿಸಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ. ಗಣತಿದಾರರು ನಾಗರೀಕರ ಮಾಹಿತಿಗಳನ್ನು ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ದಾಖಲಿಸಲಿದ್ದಾರೆ. ಮನೆಗಳ ಪಟ್ಟಿ, ಮನೆಗಳ ಗಣತಿ, ಜನಗಣತಿಯ ಸಂದರ್ಭದಲ್ಲಿ ಈ ಅವಕಾಶವನ್ನು ನಾಗರೀಕರಿಗೆ ಕಲ್ಪಿಸಲಾಗುವುದು.
ದತ್ತಾಂಶ ಸಂಗ್ರಹ, ವರ್ಗಾವಣೆ, ಶೇಖರಣೆ ಸಂದರ್ಭದಲ್ಲಿ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.