BREAKING : ಶಿವಮೊಗ್ಗದಲ್ಲಿ ಆದಷ್ಟು ಬೇಗ ‘ನಿಷೇಧಾಜ್ಞೆ’ ಹಿಂಪಡೆಯುತ್ತೇವೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಶಿವಮೊಗ್ಗದಲ್ಲಿ ಆದಷ್ಟು ಬೇಗ ‘ನಿಷೇಧಾಜ್ಞೆ’ ಹಿಂಪಡೆಯುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ನಿನ್ನೆ ನಡೆದ ಗಲಾಟೆ ರಾಜಕೀಯ ಪ್ರೇರಿತ ಎಂದು ನಾನು ಹೇಳುವುದಿಲ್ಲ. ಶಿವಮೊಗ್ಗದಲ್ಲಿ ಮೊನ್ನೆ ಗಣೇಶ ವಿಸರ್ಜನೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಈದ್ ಮಿಲಾದ್ ಮೆರವಣಿಗೆ ಹಾಗೂ ಗಣಪತಿ ವಿಸರ್ಜನೆ ಒಂದೇ ದಿನ ನಡೆದರೆ ಸಮಸ್ಯೆ ಆಗುತ್ತದೆ ಎಂದು ಬೇರೆ ಬೇರೆ ದಿನ ಇಡಲಾಗಿತ್ತು, ಆದರೂ ಕೆಲವು ಕಿಡಿಗೇಡಿಗಳು ಕಲ್ಲು ತೂರುವ ಕೆಲಸ ಮಾಡಿದ್ದಾರೆ. ಪ್ರಕರಣ ಸಂಬಂಧ ಕಾನೂನು ಪ್ರಕ್ರಿಯೆಗಳು ಆರಂಭವಾಗಿದೆ, ಶೀಘ್ರದಲ್ಲೇ ನಿಷೇಧಾಜ್ಞೆ’ ಹಿಂಪಡೆಯುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶಾಂತಿ ಕದಡುವವರ ವಿರುದ್ಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಕಾನೂನೂ ಮಿರಿ ಹೋದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read