ಬುಧವಾರದಂದು ಭಾರತ ಚಂದ್ರಯಾನ – 3 ರ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಸುರಿಮಳೆಯೇ ಹರಿದು ಬಂದಿದೆ. ಅಮೆರಿಕಾ, ರಷ್ಯಾ, ಚೀನಾ ಬಳಿಕ ಈಗ ಭಾರತದ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಇಡೀ ವಿಶ್ವವೇ ಈಗ ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ಭಾರತದ ಈ ಯಶಸ್ಸಿಗೆ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ಕೂಡಾ ಅಭಿನಂದಿಸಿದ್ದು, ಇದರ ಜೊತೆಗೆ ಭಾರತ ಈಗ ತಲುಪಿರುವ ಹಂತವನ್ನು ನಮ್ಮ ದೇಶ ತಲುಪಲು ಎರಡರಿಂದ ಮೂರು ದಶಕಗಳೇ ಬೇಕಾಗಬಹುದು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನಟಿ ಸೆಹರ್ ಅವರು ಮಾಡಿರುವ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟಿ ಸೆಹರ್, ಈ ಹಿಂದೆ ತೆಹರಿಕ್ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಗಲಭೆಗಳು ನಡೆದ ವೇಳೆ ನ್ಯಾಯಕೋರಿ ದೆಹಲಿ ಪೊಲೀಸರ ಆನ್ಲೈನ್ ಲಿಂಕ್ ಹುಡುಕಿದ್ದರು. ಇದೀಗ ಚಂದ್ರಯಾನ 3 ರ ಯಶಸ್ಸಿನ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಹಾರ್ದಿಕವಾಗಿ ಅಭಿನಂದಿಸುವುದರ ಜೊತೆಗೆ ತಮ್ಮ ದೇಶದ ಹೀನಾಯ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
https://twitter.com/SeharShinwari/status/1694344474300690676?ref_src=twsrc%5Etfw%7Ctwcamp%5Etweetembed%7Ctwterm%5E1694344474300690676%7Ctwgr%5E912a4b559ebad79061e38c33e5ca8f5a716d4f23%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwewilltake23decadestomatchindiapakistaniactressseharshinwarionchandrayaan3success-newsid-n530910666