ನಮ್ಮದು ಸಣ್ಣ ದೇಶವಾಗಿರಬಹುದು, ಬೆದರಿಸಿದ್ರೆ ನಾವು ಹೆದರುವುದಿಲ್ಲ : ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು

ಬೀಜಿಂಗ್: ಭೌಗೋಳಿಕವಾಗಿ, ನಾವು ಸಣ್ಣ ದೇಶವಾಗಿರಬಹುದು. ನಮಗೆ ಬೆದರಿಕೆ ಹಾಕುವುದು ಸರಿಯಲ್ಲ. ಇದಕ್ಕೆ ಯಾರಿಗೂ ಪರವಾನಗಿ ನೀಡಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಹೇಳಿದ್ದಾರೆ.

ಐದು ದಿನಗಳ ಚೀನಾ ಭೇಟಿಯನ್ನು ಮುಗಿಸಿ ಅವರು ಶನಿವಾರ ಸ್ವದೇಶಕ್ಕೆ ಮರಳಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಲ್ಡೀವ್ಸ್ ಸಚಿವರು ನೀಡಿದ ಹೇಳಿಕೆಗಳ ಬಗ್ಗೆ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಮುಯಿಜ್ಜು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಾವು ಸಮುದ್ರದಲ್ಲಿ 9 ಲಕ್ಷ ಚದರ ಕಿಲೋಮೀಟರ್ ಹೊಂದಿದ್ದೇವೆ. ವಿಶೇಷ ಆರ್ಥಿಕ ವಲಯ (ಇಇಝಡ್) ಇದೆ. ಇಷ್ಟು ದೊಡ್ಡ ಪಾಲನ್ನು ಹೊಂದಿರುವ ದೇಶಗಳಲ್ಲಿ ನಾವು ಒಂದಾಗಿದ್ದೇವೆ. ಈ ಸಾಗರವು ಯಾವುದೇ ಒಂದು ದೇಶಕ್ಕೆ ಸೇರಿದ್ದಲ್ಲ. ಇದು ಅದರ ಸುತ್ತಲಿನ ಎಲ್ಲಾ ದೇಶಗಳಿಗೆ ಸೇರಿದೆ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ದೇಶ ಎಂದು ಅವರು ಹೇಳಿದರು.

ಮತ್ತೊಂದೆಡೆ, ಮಾಲ್ಡೀವ್ಸ್ನ ಆಂತರಿಕ ವ್ಯವಹಾರಗಳಲ್ಲಿ ಯಾವುದೇ ದೇಶದ ಹಸ್ತಕ್ಷೇಪವನ್ನು ಬಲವಾಗಿ ವಿರೋಧಿಸುವುದಾಗಿ ಚೀನಾ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read