ನಾವು ಮಸೀದಿ ಮೇಲೆ ದಾಳಿ ಮಾಡಿಲ್ಲ: ಕದನ ವಿರಾಮದ ಬೆನ್ನಲ್ಲೇ ಪಾಕ್ ಬಣ್ಣ ಬಯಲು ಮಾಡಿದ ಕರ್ನಲ್ ಸೋಫಿಯಾ ಖುರೇಷಿ

ನವದೆಹಲಿ: ಭಾರತ-ಪಾಕ್ ಕದನ ವಿರಾಮ ಒಪ್ಪಂದದ ನಂತರ ಕಮೋಡೋರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿ ನಡೆಸಿದರು.

ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿ, ಪಾಕಿಸ್ತಾನವು ತನ್ನ ಜೆಎಫ್ 17 ಮೂಲಕ ನಮ್ಮ ಎಸ್ 400 ಮತ್ತು ಬ್ರಹ್ಮೋಸ್ ಕ್ಷಿಪಣಿ ನೆಲೆಯನ್ನು ಹಾನಿಗೊಳಿಸಿದೆ ಎಂದು ಹೇಳಿಕೊಂಡಿದೆ, ಇದು ಸಂಪೂರ್ಣವಾಗಿ ತಪ್ಪು ಎಂದು ತಿಳಿಸಿದ್ದಾರೆ.

ಎರಡನೆಯದಾಗಿ ಸಿರ್ಸಾ, ಜಮ್ಮು, ಪಠಾಣ್‌ಕೋಟ್, ಭಟಿಂಡಾ, ನಲಿಯಾ ಮತ್ತು ಭುಜ್‌ನಲ್ಲಿರುವ ನಮ್ಮ ವಾಯುನೆಲೆಗಳು ಹಾನಿಗೊಳಗಾಗಿವೆ ಎಂಬ ತಪ್ಪು ಮಾಹಿತಿಯನ್ನು ಸಹ ಪಾಕ್ ನೀಡಿದೆ. ಈ ಮಾಹಿತಿಯೂ ಸಹ ಸಂಪೂರ್ಣವಾಗಿ ತಪ್ಪು. ಮೂರನೆಯದಾಗಿ, ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಪ್ರಕಾರ, ಚಂಡೀಗಢ ಮತ್ತು ವ್ಯಾಸ್‌ನಲ್ಲಿರುವ ನಮ್ಮ ಯುದ್ಧಸಾಮಗ್ರಿ ಡಿಪೋ ಹಾನಿಗೊಳಗಾಗಿದೆ, ಇದು ಸಹ ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ.

ಭಾರತೀಯ ಸೇನೆಯು ಮಸೀದಿಗಳನ್ನು ಹಾನಿಗೊಳಿಸಿದೆ ಎಂದು ಪಾಕಿಸ್ತಾನ ಸುಳ್ಳು ಆರೋಪಗಳನ್ನು ಮಾಡಿದೆ. ಭಾರತವು ಜಾತ್ಯತೀತ ರಾಷ್ಟ್ರ ಮತ್ತು ನಮ್ಮ ಸೇನೆಯು ಭಾರತದ ಸಾಂವಿಧಾನಿಕ ಮೌಲ್ಯದ ಅತ್ಯಂತ ಸುಂದರವಾದ ಪ್ರತಿಬಿಂಬವಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಪಾಕಿಸ್ತಾನ ಮಸೀದಿ ಮೇಲೆ ದಾಳಿ ಮಾಡಿಲ್ಲ. ಯಾವುದೇ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಿಲ್ಲ. ಪಾಕ್ ಸೇನಾ ನೆಲೆ, ಉಗ್ರರ ನೆಲೆಗಳಿಗೆ ಹಾನಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read