Viral Video | ನಟಿ ತಮನ್ನಾಗೆ ಟಕ್ಕರ್ ಕೊಡುವಂತೆ ಡಾನ್ಸ್ ಮಾಡಿದ ಪೊಲೀಸ್ ಅಧಿಕಾರಿ

mumbai cop dance

ಎಲ್ಲೆಲ್ಲೂ ತಲೈವಾ ರಜನಿಕಾಂತ್ ಅಭಿನಯದ ‘ಜೈಲರ್‘ ಸಿನೆಮಾದ್ದೇ ಹವಾ. ಈ ಹಿಂದೆ ಹಿಟ್ ಆಗಿರುವ ಎಲ್ಲ ಸಿನೆಮಾಗಳ ದಾಖಲೆಯನ್ನ ಬ್ರೇಕ್ ಮಾಡಿ ‘ಜೈಲರ್’ ಮುನ್ನುಗ್ತಾ ಇದೆ. ಅಭಿಮಾನಿಗಳು ‘ಜೈಲರ್’ ಸಿನೆಮಾದಲ್ಲಿರೋ ರಜನಿಕಾಂತ್ ಅಭಿಯನಕ್ಕೆ ಮಾತ್ರ ಅಲ್ಲ, ಇದೇ ಸಿನೆಮಾದ ನಟಿ ತಮನ್ನಾ ಸ್ಟೆಪ್ ಹಾಕಿರೋ ‘ಕಾವಾಲಾ’ ಹಾಡಿಗೂ ಅಷ್ಟೆ ಫಿದಾ ಆಗ್ಹೋಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತೂ ಈ ‘ಕಾವಾಲಾ’ ಹಾಡು ಸೆನ್ಸೆಶನ್ ಹುಟ್ಟು ಹಾಕಿದೆ. ಇನ್ನೂ ಜನರಂತೂ ಈ ಟ್ರ್ಯಾಕ್​​ಗೆ ಹೆಜ್ಜೆ ಹಾಕಿದ್ದೇ ಹಾಕಿದ್ದು. ಸದ್ಯಕ್ಕಂತೂ ‘ಜೈಲರ್’ ಹಾಗೂ ‘ಕಾವಾಲಾ’ ಫೀವರ್ ಎಲ್ಲೆಲ್ಲೂ ಹರಡಿಕೊಂಡಿದೆ. ಈಗ ಇದೇ ‘ಕಾವಾಲಾ’ ಜ್ವರ ಪೊಲೀಸ್​​ನವರಿಗೂ ಅಂಟ್ಕೊಂಡಿದೆ.

ಕೆಲವೇ ಕೆಲವು ದಿನಗಳ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು, ಈ ‘ಕಾವಾಲಾ’ ಹಾಡಿಗೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಈ ವಿಡಿಯೋ ನೋಡಿದವರೆಲ್ಲರೂ ಶಾಕ್ ಆಗ್ಹೋಗಿದ್ದರು. ಹೀಗೆ ಡಾನ್ಸ್ ಮಾಡಿದವರು ಪೊಲೀಸ್ ಅಧಿಕಾರಿ ಅಮೋಲ್ ಕಾಂಬ್ಳೆ. ಈಗ ಅಮೋಲ್ ಮತ್ತೇ ಇದೇ ಹಾಡಿಗೆ ಡಾನ್ಸ್ ಮಾಡಿ ಸುದ್ದಿಯಲ್ಲಿದ್ದಾರೆ. ಈ ಬಾರಿ ಡಾನ್ಸ್ ಮಾಡುವಾಗ ಅವರಿಗೆ ಡಾನ್ಸರ್ ಶ್ರೇಯಾ ಸಾಥ್ ಕೊಟ್ಟಿದ್ದಾರೆ.

ಈಗ ಖುದ್ದು ಅವರೇ ಈ ವಿಡಿಯೋವನ್ನ ತಮ್ಮ ಇನ್ಸ್​ಸ್ಟಾಗ್ರಾಮ್​​ನಲ್ಲಿ ಈ ವಿಡಿಯೋವನ್ನ ಅಪ್ಲೋಡ್ ಮಾಡಿದ್ದಾರೆ. ಇವರು ಡಾನ್ಸ್ ಮಾಡುವ ವೈಖರಿ ನೋಡ್ತಿದ್ರೆ, ಇವರು ಈಗ ಪೊಲೀಸ್ ಅಧಿಕಾರಿಯಾಗಿಲ್ಲದೇ ಹೋಗಿದ್ದರೆ, ಓರ್ವ ನೃತ್ಯ ನಿರ್ದೇಶಕ ಆಗಿರೋರಂತೂ ಖಂಡಿತ. ಒಟ್ಟಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಿಂದಾಸ್ ಡಾನ್ಸ್ ನೋಡಿ ನೆಟ್ಟಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read